alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ರೇಸ್-3 ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್

ಕೊನೆಗೂ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ರೇಸ್-3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದ್ರಲ್ಲಿ ಸಲ್ಮಾನ್ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾದ ಒಂದು ಗಂಟೆಯಲ್ಲಿ 4 ಲಕ್ಷ ಬಾರಿ ಟ್ರೈಲರ್ ವೀಕ್ಷಣೆ ಮಾಡಲಾಗಿದೆ.

ಟ್ರೈಲರ್ ನಲ್ಲಿ ಸಲ್ಮಾನ್ ಖಾನ್ ಜೊತೆ ಜಾಕ್ವೇಲಿನ್ ಫರ್ನಾಂಡಿಸ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗ್ತಿದೆ. ಬಾಲಿವುಡ್ ಬಹುನಿರೀಕ್ಷಿತ ಚಿತ್ರ ರೇಸ್-3 ಜೂನ್ 15ರಂದು ತೆರೆಗೆ ಬರಲಿದೆ.

ಚಿತ್ರವನ್ನು ರೆಮೋ ಡಿಸೋಜಾ ನಿರ್ದೇಶನ ಮಾಡಿದ್ದಾರೆ. ವರದಿ ಪ್ರಕಾರ ಬಿಡುಗಡೆಗೂ ಮುನ್ನವೇ ಚಿತ್ರವನ್ನು ಮಾರಾಟ ಮಾಡಲಾಗಿದೆ. ಸಹ ನಿರ್ಮಾಪಕ ರಮೇಶ್ 190 ಕೋಟಿಗೆ ಚಿತ್ರವನ್ನು ಮಾರಾಟ ಮಾಡಿದ್ದಾರೆ. ಸಲ್ಮಾನ್ ಖಾನ್ ಹಿಂದಿನ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಸುಮಾರು 300 ಕೋಟಿ ಗಳಿಕೆ ಕಾಣಲಿದೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...