alex Certify
ಕನ್ನಡ ದುನಿಯಾ       Mobile App
       

Kannada Duniya

8 ವರ್ಷಗಳ ಬಳಿಕ ಬಹಿರಂಗವಾಯ್ತು ಸಲ್ಮಾನ್ ಖಾನ್ ಇನ್ನೊಂದು ಮುಖ

ಒಂದು ಕಾಲದಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಇಮೇಜ್ ಹೊಂದಿದ್ದ ಸಲ್ಮಾನ್ ಖಾನ್, ಬಳಿಕ ಅದರಿಂದ ಹೊರ ಬರಲು ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದಕ್ಕಾಗಿಯೇ ‘ಬೀಯಿಂಗ್ ಹ್ಯೂಮನ್’ ಎಂಬ ಸ್ವಯಂ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದರ ಮೂಲಕ ಸಾಕಷ್ಟು ಮಂದಿಗೆ ನೆರವಾಗುತ್ತಿದ್ದಾರೆ.

ಇದರ ಮಧ್ಯೆ ಎಂಟು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಮಾಡಿರುವ ಮಹತ್ತರ ಕಾರ್ಯವೊಂದು ಈಗ ಬಹಿರಂಗವಾಗಿದೆ. ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಡಾಕ್ಟರ್ ಹಾಥಿ ಖ್ಯಾತಿಯ ಕವಿಕುಮಾರ್ ಆಜಾದ್ ಎಂಟು ವರ್ಷಗಳ ಹಿಂದೆ ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ಕೂಡಲೇ ಅವರ ನೆರವಿಗೆ ಧಾವಿಸಿದ್ದ ಸಲ್ಮಾನ್, ಶಸ್ತ್ರಚಿಕಿತ್ಸೆಯಿಂದ ಹಿಡಿದು ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರೆನ್ನಲಾಗಿದೆ.

‘ತಾರಕ್ ಮೆಹತಾ ಕಾ ಉಲ್ಟಾ ಚಸ್ಮಾ’ ಧಾರವಾಹಿಯ ತಮ್ಮ ಡಾಕ್ಟರ್ ಹಾಥಿ ಪಾತ್ರದಿಂದಲೇ ಮನೆಮಾತಾಗಿದ್ದ ಕವಿಕುಮಾರ್ ಆಜಾದ್, ಎಂಟು ವರ್ಷಗಳ ಹಿಂದೆ ಚಿತ್ರೀಕರಣದ ಸಂದರ್ಭದಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೇರಿಯಾಟ್ರಿಕ್ ಸರ್ಜರಿ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ನೀಡಲಾಗಿತ್ತು. ಈ ವಿಷಯ ತಿಳಿದ ಸಲ್ಮಾನ್ ಖಾನ್ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಭರಿಸಿದ್ದರೆಂಬ ಸಂಗತಿ ಈಗ ಬಹಿರಂಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...