alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಸಲ್ಲು ಮನೆಗೆ ಬರ್ತಿಲ್ಲ ಗಣೇಶ

salman_1024_1503288588_618x347

ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಗೆ ಕಳೆದ 14 ವರ್ಷಗಳಿಂದ ಗಣೇಶ ಬರ್ತಿದ್ದ. ಗಣೇಶ ಹಬ್ಬವನ್ನು ಸಲ್ಮಾನ್ ಕುಟುಂಬ ಅದ್ಧೂರಿಯಾಗಿ ಆಚರಿಸ್ತಾ ಇತ್ತು. ಆದ್ರೆ ಈ ಬಾರಿ ಸಲ್ಮಾನ್ ಖಾನ್ ಮನೆಗೆ ಗಣೇಶ ಬರ್ತಿಲ್ಲ.

ಹೆಸರಿಗೆ ಮುಸ್ಲಿಂ ಆದ್ರೂ ಸಲ್ಮಾನ್ ಖಾನ್ ಎಲ್ಲ ಧರ್ಮದ ಹಬ್ಬಗಳನ್ನೂ ಆಚರಿಸ್ತಾರೆ. ಗಣೇಶನ ಮೇಲೆ ಸಾಕಷ್ಟು ನಂಬಿಕೆಯಿಟ್ಟಿದ್ದಾರೆ ಸಲ್ಮಾನ್. ತನ್ನೆಲ್ಲ ಸಂಕಷ್ಟವನ್ನು ಗಣಪತಿ ಬಗೆಹರಿಸಿದ್ದಾನೆಂದು ಹಿಂದೊಮ್ಮೆ ಸಲ್ಮಾನ್ ಹೇಳಿದ್ರು. ಇಷ್ಟಿದ್ದೂ ಈ ವರ್ಷ ಗಣೇಶ ಏಕೆ ಸಲ್ಮಾನ್ ಮನೆಗೆ ಬರ್ತಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡೋದು ಸಹಜ.

ಈ ಬಾರಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಮನೆಗೆ ಗಣೇಶ ಹಾಜರಾಗಲಿದ್ದಾನೆ. ಹಾಗಾಗಿ ಎಲ್ಲರೂ ಅರ್ಪಿತಾ ಮನೆಯಲ್ಲಿಯೇ ಹಬ್ಬ ಮಾಡುವ ತಯಾರಿಯಲ್ಲಿದ್ದಾರೆ. ಸಲ್ಮಾನ್ ಇಡೀ ಕುಟುಂಬ ಅರ್ಪಿತಾ ಮನೆಯಲ್ಲಿ ಸೇರಲಿದೆ. ಸಲ್ಮಾನ್ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಅರ್ಪಿತಾ ಗಣೇಶ ಚತುರ್ಥಿ ಆಚರಿಸುವ ಪದ್ಧತಿ ಶುರುಮಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...