alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಪೋರ್ಟ್ ಸಿಬ್ಬಂದಿ ಜೊತೆ ಸಲ್ಮಾನ್ ಖಾನ್ ಕಿರಿಕ್

salman at airportಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ವಿವಾದಕ್ಕೂ ಬಿಡಿಸಲಾಗದ ನಂಟು. ಕೆಲ ದಿನಗಳ ಹಿಂದಷ್ಟೇ ಅತ್ಯಾಚಾರದ ಕುರಿತು ಸಲ್ಮಾನ್ ಖಾನ್ ಮಾಡಿದ್ದ ಕಮೆಂಟ್ ವಿವಾದದ ಕಿಡಿ ಹೊತ್ತಿಸಿತ್ತು. ಅದು ತಣ್ಣಗಾಗುವ ಮೊದಲೇ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.

ಸೋಮವಾರ, ಸಲ್ಮಾನ್ ಖಾನ್ ಮುಂಬೈನಿಂದ ದೆಹಲಿಗೆ ವಿಸ್ತಾರ ಏರ್ ಲೈನ್ಸ್ ನಲ್ಲಿ ಹೋಗಬೇಕಿತ್ತು. ಸಲ್ಮಾನ್ ಖಾನ್ 15 ನಿಮಿಷ ತಡವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇದರಿಂದಾಗಿ ಅವರಿಗೆ ವಿಮಾನ ಏರಲು ಅವಕಾಶ ನೀಡಲಿಲ್ಲ. ನಿಯಮಾವಳಿಯಂತೆ ವಿಮಾನ ಹಾರಾಟ ಆರಂಭಿಸುವ 1 ಗಂಟೆ ಮೊದಲು ಅವರು ನಿಲ್ದಾಣದಲ್ಲಿರಬೇಕಿದ್ದರಿಂದ ವಿಮಾನ, ನಿಲ್ದಾಣದಲ್ಲಿದ್ದರೂ ಅವರಿಗೆ ನಿರಾಕರಿಸಲಾಗಿದೆ.

ಇದರಿಂದ ಸಿಟ್ಟಿಗೆದ್ದ ಸಲ್ಮಾನ್ ಖಾನ್, ವಿಸ್ತಾರ ಏರ್ ಲೈನ್ಸ್ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದಿದ್ದಾರೆ. ಕಡೆಗೆ ತಾವು ತಡವಾಗಿ ಬಂದಿದ್ದಕ್ಕೆ ಕಾರಣ ನೀಡಿದ ಸಲ್ಮಾನ್ ಖಾನ್, ತಮಗೆ ದೆಹಲಿಗೆ ತೆರಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರೂ ಇದ್ಯಾವುದಕ್ಕೂ ಜಗ್ಗದ ಸಿಬ್ಬಂದಿ, ನಿಯಮಾವಳಿಗಳ ಕಾರಣ ಹೇಳಿ ಕಡೆಗೂ ಸಲ್ಮಾನ್ ಖಾನ್ ಅವರಿಗೆ ಅವಕಾಶ ನೀಡಿಲ್ಲ. ಬಳಿಕ ಜೆಟ್ ಏರ್ವೇಸ್ ನಲ್ಲಿ ಸಲ್ಮಾನ್ ದೆಹಲಿಗೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...