alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ಸಲ್ಮಾನ್ ರ ಫೋಟೋ

Salman Khan met Dalai Lama with Iulia Vantur and now it’s breaking the internet, see picಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ರ ಫೋಟೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಫೋಟೋ ಕುರಿತು ವಿವಿಧ ಕಮೆಂಟ್ ಗಳು ಕೇಳಿ ಬರುತ್ತಿವೆ.

ಕಬೀರ್ ಖಾನ್ ರ ‘ಟ್ಯೂಬ್ ಲೈಟ್’ ಚಿತ್ರದ ಚಿತ್ರೀಕರಣಕ್ಕಾಗಿ ಸದ್ಯ ಲಡಾಕ್ ನಲ್ಲಿರುವ ಸಲ್ಮಾನ್ ಖಾನ್ ತಮ್ಮ ಗೆಳತಿ ಲೂಲಿಯಾ ವಾಂಟೋರ್ ಜೊತೆ ದಲೈಲಾಮಾರನ್ನು ಭೇಟಿಯಾಗಿದ್ದು, ಯಾವ ವಿಚಾರದ ಕುರಿತು ಸಲ್ಮಾನ್ ಚರ್ಚೆ ನಡೆಸಿರಬಹುದೆಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಲ್ಮಾನ್ ಖಾನ್ ಹಾಗೂ ಲೂಲಿಯಾ ವಿವಾಹವಾಗಲಿದ್ದಾರೆಂಬ ವದಂತಿಗಳು ಹಲವು ತಿಂಗಳಿನಿಂದಲೂ ಕೇಳಿ ಬರುತ್ತಿದ್ದು, ಇವರಿಬ್ಬರು ವಿವಾಹವಾಗುವ ಮುನ್ನ ದಲೈಲಾಮಾರನ್ನು ಭೇಟಿ ಮಾಡಿ ಅಶೀರ್ವಾದ ಪಡೆದಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ. ‘ಏಕ್ತಾ ಥಾ ಟೈಗರ್, ‘ಬಜರಂಗಿ ಭಾಯಿಜಾನ್’ ಚಿತ್ರದ ಬಳಿಕ ‘ಟ್ಯೂಬ್ ಲೈಟ್’ ಮೂಲಕ ಕಬೀರ್ ಖಾನ್ ಹಾಗೂ ಸಲ್ಮಾನ್ ಮೂರನೇ ಬಾರಿಗೆ ಒಂದಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗ ಲಡಾಕ್ ನಲ್ಲಿ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...