alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಬಿಟ್ಟು ಬೇರೆ ಏನು ಮಾಡ್ತಾರೆ ಸಲ್ಮಾನ್…?

ನಟ ಸಲ್ಮಾನ್ ಖಾನ್ ರ ‘ಟೈಗರ್ ಜಿಂದಾ ಹೈ’ ಚಿತ್ರ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಭಾರೀ ಗಳಿಕೆಯನ್ನು ಮಾಡುತ್ತಿದೆ. ಕತ್ರೀನಾ ಕೈಫ್ ಜೊತೆ ಬಹು ವರ್ಷಗಳ ಬಳಿಕ ಸಲ್ಮಾನ್ ಅಭಿನಯಿಸಿದ್ದು, ಚಿತ್ರ ಹಲವು ದಾಖಲೆಗಳನ್ನು ಮಾಡುವ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಹೊರತಾದ ಸಲ್ಮಾನ್ ಬದುಕಿನ ಕುರಿತ ಪುಟ್ಟ ಚಿತ್ರಣ ಇಲ್ಲಿದೆ.

ಬಾಲಿವುಡ್ ನಲ್ಲಿ ದಬಾಂಗ್ ಬಾಯ್ ಎಂದೇ ಹೆಸರು ಪಡೆದವರು ಸಲ್ಮಾನ್ ಖಾನ್. ತಮ್ಮ ಕುಟುಂಬ ಹಾಗೂ ಸ್ನೇಹಿತರಿಗಾಗಿ ಸಲ್ಮಾನ್ ಏನು ಬೇಕಾದ್ರೂ ಮಾಡಬಲ್ಲರು.

ತಮ್ಮ ಕುಟುಂಬ ಹಾಗೂ ಸ್ನೇಹಿತರ ವಿಷಯ ಬಂದಾಗ ಯಾವುದೇ ಚಿತ್ರಕಥೆ ಅಥವಾ ಉಡುಗೊರೆಗೆ ಅವರು ಮಹತ್ವ ನೀಡುವುದಿಲ್ಲ. ತಮ್ಮವರಿಗಾಗಿ ಕೆಟ್ಟ ಕಥೆಯನ್ನೂ ಚಿತ್ರ ಮಾಡಬಲ್ಲರು, ದುಬಾರಿ ಉಡುಗೊರೆಯನ್ನೂ ನೀಡಬಲ್ಲರು. ಇದೇ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ರನ್ನು ಇತರ ಸ್ಟಾರ್ ಗಳಿಗಿಂತ ಭಿನ್ನವಾಗಿರಿಸಿದೆ.

ಬಾಲಿವುಡ್ ನಲ್ಲಿ ಸಲ್ಮಾನ್ ಚಿತ್ರ ಕೋಟಿ ಕೋಟಿ ಸಂಪಾದಿಸುತ್ತದೆ. ಆದ್ರೆ ಕೋಟಿ ಒಡೆಯ ಸಲ್ಮಾನ್ ಮಾತ್ರ ಜನಸಾಮಾನ್ಯರಂತೆ ರಸ್ತೆಗಿಳಿದು ಎಲ್ಲರನ್ನು ಆಶ್ಚರ್ಯಗೊಳಿಸ್ತಾರೆ.

ಕೆಲ ದಿನಗಳ ಹಿಂದೆ ಸಲ್ಲುನ ಒಂದು ಫೋಟೋ ಹೊರಬಿದ್ದಿದೆ. ಅದ್ರಲ್ಲಿ ಸಲ್ಮಾನ್ ಖಾನ್ ಆಟೋದಲ್ಲಿ ಸಂಚರಿಸಿದ್ದಾರೆ. ಹಿಂದೆ ಕೂಡ ಸಲ್ಮಾನ್ ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು.

ಸ್ಲೈಕ್ಲಿಂಗ್ ಮಾಡಿ ಸಲ್ಮಾನ್ ಅಭಿಮಾನಿಗಳಿಗೆ ಆಶ್ಚರ್ಯಗೊಳಿಸಿದ್ದಾರೆ. ತಮಗೆ ಮೂಡ್ ಬಂದಾಗ ಸೈಕಲ್ ಏರಿ ರಸ್ತೆಗಿಳಿತಾರೆ ಸಲ್ಮಾನ್.

ಸ್ವಚ್ಛ ಭಾರತ ಅಭಿಯಾನವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಲ್ಮಾನ್ ಖಾನ್ ನಾಗರಿಕರೊಂದಿಗೆ ಪೊರಕೆ ಹಿಡಿದಿದ್ದೂ ಇದೆ.

ಕ್ಷೌರ ಮಾಡುವ ಅವಕಾಶ ಸಿಕ್ಕಾಗ ಸಲ್ಲು ಕೆಲಸವನ್ನೂ ಮಾಡಿದ್ದಾರೆ.

ಮಕ್ಕಳನ್ನು ತುಂಬಾ ಪ್ರೀತಿಸುವ ಸಲ್ಮಾನ್ ಸಮಯ ಸಿಕ್ಕಾಗ ಅವರ ಜೊತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಾರೆ.

ಮಕ್ಕಳನ್ನೊಂದೇ ಅಲ್ಲ ಪ್ರಾಣಿಗಳನ್ನೂ ಅಷ್ಟೇ ಪ್ರೀತಿಸುವ ಸಲ್ಮಾನ್ ಇಣಚಿ ಜೊತೆ ಕೂಡ ಆಟ ಆಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...