alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ನಿಯಮ ಉಲ್ಲಂಘಿಸಿದವರ ಪಟ್ಟಿಯಲ್ಲಿದ್ದಾರೆ ಖ್ಯಾತನಾಮರು

ಅತಿ ವೇಗದ ವಾಹನ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಗಳಲ್ಲಿ ವಾಹನ ನಿಲ್ಲಿಸಿರೋದು, ನೋ ಎಂಟ್ರಿಗಳನ್ನ ಲೆಕ್ಕಿಸದೆ ಕಾರು ನುಗ್ಗಿಸಿರೋದು ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ದಂಡ ಕಟ್ಟದಿರುವ ಪ್ರಜೆಗಳ ಪಟ್ಟಿಯನ್ನ, ಮುಂಬೈ ಟ್ರಾಫಿಕ್ ಪೊಲೀಸರು ಸಿದ್ಧಪಡಿಸಿದ್ದಾರೆ.

ಆ ಪಟ್ಟಿಯ ಪ್ರಕಾರ ಮುಂಬೈನ ಖ್ಯಾತನಾಮರು, ಸೆಲೆಬ್ರಿಟಿಗಳು ಕೂಡ ಟ್ರಾಫಿಕ್ ಪೊಲೀಸರಿಗೆ ದಂಡವನ್ನ ಪಾವತಿಸಬೇಕಿದೆ. ಕೇವಲ ಮುಂಬೈ ಒಂದರಿಂದಲೇ ಸಂಚಾರಿ ನಿಯಮ ಉಲ್ಲಂಘನೆಗಾಗಿ ಪೊಲೀಸರು ವಿತರಿಸಿರುವ ಒಟ್ಟು ಇ -ಚಲನ್ ಗಳ ಮೊತ್ತ ಎಷ್ಟು ಗೊತ್ತಾ…? ಬರೋಬ್ಬರಿ 119 ಕೋಟಿ ರೂಪಾಯಿ.

ವಿಚಿತ್ರ ಏನಂದ್ರೆ ಈ ಪಟ್ಟಿಯಲ್ಲಿ ಮಹಾರಾಷ್ಟ್ರದ ಸಾರಿಗೆ ಸಚಿವರು ಸೇರಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್, ಎಂಎನ್ಎಸ್ ಸಂಸ್ಥಾಪಕ ರಾಜ್ ಠಾಕ್ರೆ, ಆನಂದ್ ಠಾಕ್ರೆ, ನಟ ಕಪಿಲ್ ಶರ್ಮಾ, ಮುಂಬೈನ ಮೇಯರ್, ಎನ್ ಸಿ ಪಿ ಮುಖಂಡ ಅಜಿತ್ ಪವಾರ್, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರಾಮ್ ಕದಮ್ ಸೇರಿದಂತೆ ಹಲವು ಖ್ಯಾತ ನಾಮರಿಗೆ ದಂಡ ವಸೂಲಿಯ ಇ- ಚಲನ್ ಗಳನ್ನ ತಲುಪಿಸಿದ್ದಾರೆ.

ಮಹಾರಾಷ್ಟ್ರದ ದಿನಪತ್ರಿಕೆಯೊಂದರ ತನಿಖಾ ವರದಿಯ ಪ್ರಕಾರ ಎಂಎಚ್ 02 ಬಿವೈ 2727 ಹೆಸರಿನ ವಾಹನ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಈ ವಾಹನ ಪ್ರಸಕ್ತ ವರ್ಷದಲ್ಲಿ ಜನವರಿಯಿಂದ ಜೂನ್ ವರೆಗೆ ಹಲವು ಬಾರಿ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಕಾರಣಕ್ಕಾಗಿ ಸುಮಾರು 4000 ರೂಪಾಯಿ ದಂಡ ಬಾಕಿ ಇದೆ. ಇದಕ್ಕೆ ಸಂಬಂಧಿಸಿದ ಇ- ಚಲನ್ ಗಳನ್ನ ನೀಡಲಾಗಿದೆಯಂತೆ. ಆದ್ರೆ ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಪೊಲೀಸರು ಈ ಬಗ್ಗೆ ನಮಗೆ ತಿಳಿಸಿದ್ದರೆ ನಾವು ದಂಡವನ್ನು ಕಟ್ಟಿಬಿಡ್ತಿದ್ವಿ ಅಂದಿದೆ ಸಲ್ಮಾನ್ ಖಾನ್ ಕುಟುಂಬ.

ಇದೇ ರೀತಿ ಹಲವು ಖ್ಯಾತನಾಮರು ಮತ್ತು ಸೆಲೆಬ್ರಿಟಿಗಳ ಕಾರು ಸಂಚಾರಿ ನಿಯಮ ಉಲ್ಲಂಘಿಸಿ ದಂಡವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಮಹಾರಾಷ್ಟ್ರದ ಸಾರಿಗೆ ಸಚಿವರ ಪುತ್ರ ಕೂಡ ದಂಡ ಪಾವತಿಸದವರ ಪಟ್ಟಿಯಲ್ಲಿದ್ದಾನೆ. ವಾಹನ ಚಾಲಕರೇ ನಿಯಮ ಉಲ್ಲಂಘಿಸಿದ್ರು, ಆ ಬಗ್ಗೆ ಎಚ್ಚರ ವಹಿಸಬೇಕಾದದ್ದು ಕಾರು ಮಾಲೀಕರ ಕರ್ತವ್ಯ ಅಂತ ಮುಂಬೈ ಪೊಲೀಸರು ತಿಳಿಸಿದ್ದಾರೆ.

2016ರ ಅಕ್ಟೋಬರ್ ನಲ್ಲಿ ಮುಂಬೈ ಪೊಲೀಸರು ಇ- ಚಲನ್ ವ್ಯವಸ್ಥೆಯನ್ನ ಜಾರಿಗೆ ತಂದರು. ಅಂದಿನಿಂದ ಪ್ರಸಕ್ತ ವರ್ಷದವರೆಗೂ ಮುಂಬೈ ಪೊಲೀಸರು ವಿತರಿಸಿರುವ ಇ- ಚಲನ್ ಗಳ ದಂಡದ ಮೊತ್ತ 172 ಕೋಟಿ 44 ಲಕ್ಷ. 53ಲಕ್ಷದಷ್ಟು ಇ- ಚಲನ್ ಗಳನ್ನ ಪೊಲೀಸರು ವಿತರಿಸಿದ್ದಾರಂತೆ. ಈ ಹಣದಲ್ಲಿ 53 ಕೋಟಿ 80 ಲಕ್ಷದಷ್ಟು ದಂಡ ಪಾವತಿಯಾಗಿದೆ. ಇ- ಚಲನ್ ಗಳು ದುರುಪಯೋಗವಾಗ್ತಿವೆ ಅಂತ ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ವಾಹನಗಳ ಮಾಲೀಕರು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ವಾಹನದ ನೊಂದಣಿ ಮಾಡಿಸಿ ಅಂತ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...