alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಸದ್ದು ಮಾಡ್ತಿದೆ ಸಲ್ಮಾನ್ ತೆಗೆದಿರೋ ಫೋಟೋ

ಬಾಲಿವುಡ್ ನ ಹಾಸ್ಯ ನಟ ಸುನೀಲ್ ಗ್ರೋವರ್ ಅವರ ಫೋಟೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡ್ತಿದೆ. ಅದು ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಸೆಟ್ ನಲ್ಲಿ ತೆಗೆದಿರುವಂತಾ ಫೋಟೋ. ಈ ಫೋಟೋದಲ್ಲಿ ಸುನೀಲ್ ಗ್ರೋವರ್ ಒಂದು ಆಂಗಲ್ ನಿಂದ ನೋಡೋದಕ್ಕೆ ಶಾರುಕ್ ಖಾನ್ ರೀತಿಯಲ್ಲೇ ಪೋಸ್ ಕೊಟ್ಟಿದ್ದಾರೆ.

ಸುನೀಲ್ ಗ್ರೋವರ್ ರನ್ನ ಈ ರೇಂಜಿಗೆ ಫೋಟೋದಲ್ಲಿ ಸೆರೆ ಹಿಡಿದಿದ್ದು ಯಾರು ಅನ್ನೋದನ್ನ ತಿಳಿದುಕೊಂಡ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಯಾಕಂದ್ರೆ ಇಲ್ಲಿ ಸುನೀಲ್ ಗ್ರೋವರ್ ಗೆ ಕ್ಯಾಂಡಿಡ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿರೋದು ಸಲ್ಮಾನ್ ಖಾನ್. ಯುರೋಪ್ ನ ಮಾಲ್ಟಾಗೆ ಭಾರತ್ ಚಿತ್ರೀಕರಣಕ್ಕಾಗಿ ತೆರಳಿರುವ ಸಲ್ಮಾನ್ ಬಿಹೈಂಡ್ ದ ಸ್ಕ್ರೀನ್ ಚಿತ್ರದ ಸಹ ನಟರಿಗೆ ಬೆಸ್ಟ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.

ಸುನೀಲ್ ಗ್ರೋವರ್ ಅವರ ಚಿತ್ರವನ್ನು ಸೆರೆ ಹಿಡೀತಿರೋ ತಮ್ಮದೇ ಫೋಟೋವನ್ನ ಸಲ್ಮಾನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ಒಳ್ಳೆ ಫೋಟೋ ತೆಗಿಬೇಕು ಅಂದ್ರೆ ತುಂಬಾನೇ ಫೋಕಸ್ ಮಾಡಬೇಕಾಗುತ್ತೆ ಅಂತ ಸಲ್ಮಾನ್ ಈ ಫೋಟೋಗೆ ಮೆಸೇಜ್ ಹಾಕಿದ್ದಾರೆ. ಫೋಟೋ ನೋಡಿದ ಸಲ್ಲು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ದಿನದ ಸಲುವಾಗಿ ಸಲ್ಮಾನ್ ಅಪ್ಕಮಿಂಗ್ ಸಿನಿಮಾ ಭಾರತ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿದೆ. 2019ರ ಈದ್ ಮಿಲಾದ್ ಹಬ್ಬಕ್ಕೆ ಭಾರತ್ ಸಿನಿಮಾ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...