alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ಸಲ್ಮಾನ್ ಖಾನ್ ಯಾಕಿನ್ನೂ ಮದ್ವೆಯಾಗಿಲ್ಲ ಗೊತ್ತಾ?

ನಟ ಸಲ್ಮಾನ್ ಖಾನ್ ಗೆ ವಯಸ್ಸು 52 ಆಯ್ತು. ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಗೆ ಇನ್ನೂ ಮದುವೆಯಾಗಿಲ್ಲ. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮದ್ವೆ ಯಾವಾಗ ಅನ್ನೋ ಪ್ರಶ್ನೆಯನ್ನು ಸಲ್ಲುಗೆ ಎಲ್ರೂ ಕೇಳ್ತಾರೆ.

ಒಂದಿಲ್ಲೊಂದು ಹಾರಿಕೆ ಉತ್ತರ ಕೊಟ್ಟು ಜಾರಿಕೊಳ್ಳೋದು ಸಲ್ಮಾನ್ ಗೆ ರೂಢಿಯಾಗಿಬಿಟ್ಟಿದೆ. ಆದ್ರೆ ಈ ಬಾರಿ ಮದ್ವೆ ಯಾಕಾಗಿಲ್ಲ ಅನ್ನೋ ಪ್ರಶ್ನೆಗೆ ಸಲ್ಮಾನ್ ಕೊಟ್ಟಿರೋ ಉತ್ತರ ಕೇಳಿ ಎಲ್ರೂ ಶಾಕ್ ಆಗಿದ್ದಾರೆ. ಮದುವೆಗಳು ಈಗ ದುಬಾರಿಯಾಗಿಬಿಟ್ಟಿವೆ ಅಂತಾರೆ ಸಲ್ಲು.

ಮದ್ವೆಗಾಗಿ ಜನ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಾರೆ. ಅಷ್ಟೊಂದು ಹಣ ನನ್ನ ಬಳಿಯಿಲ್ಲ. ಹಾಗಾಗಿ ಮದುವೆಯಾಗದೇ ಇನ್ನೂ ಸಿಂಗಲ್ ಆಗಿಯೇ ಇದ್ದೇನೆ ಅಂತಾ ಹೇಳಿದ್ದಾರೆ. ಆದ್ರೆ ಇದು ನಿಜವಾದ ಕಾರಣ ಅಲ್ಲ ಅನ್ನೋದಂತೂ ಸ್ಪಷ್ಟ.

ಯಾಕಂದ್ರೆ 2014ರಲ್ಲಿ ಸಹೋದರಿ ಅರ್ಪಿತಾ ಮದುವೆಗೆ ಸಲ್ಮಾನ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಈ ಬಾಲಿವುಡ್ ನಟನ ಆಸ್ತಿ 232.83 ಕೋಟಿ ರೂಪಾಯಿ. ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು ಸಲ್ಮಾನ್. ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಸಲ್ಮಾನ್ ನಟನೆಯ ‘ಟೈಗರ್ ಜಿಂದಾ ಹೈ’ ಚಿತ್ರ 300 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗಾಗಿ ದುಡ್ಡಿಲ್ಲ ಅನ್ನೋ ಕಾರಣಕ್ಕೆ ಮದ್ವೆಯಾಗಿಲ್ಲ ಅನ್ನೋ ಸಲ್ಲು ಮಾತನ್ನು ಅಭಿಮಾನಿಗಳು ಒಪ್ತಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...