alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಿಂದ ಹೊರಬಂದ ಸಲ್ಮಾನ್ ಏನ್ಮಾಡ್ತಿದ್ದಾರೆ ಗೊತ್ತಾ?

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೈಲಿಗೆ ಹೋಗಿ ಹೊರ ಬಂದಿದ್ದು ಸಾಕಷ್ಟು ಟೀಕೆಗೆ ಗುರಿಯಾದರೂ ಕೋಟ್ಯಂತರ ಸಲ್ಲು ಅಭಿಮಾನಿಗಳಿಗೆ ಇದು ಖುಷಿಯ ಸಂಗತಿ ಅನ್ನೋದು ಸುಳ್ಳಲ್ಲ.

ಜೈಲಿನಿಂದ ಹೊರಬಂದ ದಿನದಿಂದಲೇ ಸಲ್ಮಾನ್ ನಾರ್ಮಲ್ ಲೈಫ್ ಗೆ ಮರಳಿದ್ದಾರೆ. ಎರಡು ದಿನದ ಜೈಲುವಾಸ ಅವರನ್ನು ಮಾನಸಿಕವಾಗಿ ಸಾಕಷ್ಟು ಕುಗ್ಗಿಸಿರುತ್ತೆ ಅಂತಾ ನೀವು ಆಲೋಚನೆ ಮಾಡಿದ್ದರೆ ಖಂಡಿತಾ ಅದು ತಪ್ಪಾಗುತ್ತೆ.

ಸಲ್ಲು ಜೈಲಿನಿಂದ ಹೊರಬಂದ ಬಳಿಕ ಶಾಲೆಯೊಂದರ ಆನ್ಯುವಲ್ ಡೇ ನಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳ ಜೊತೆ ಬೆರೆತಿದ್ದಾರೆ. ಅವರೊಂದಿಗೆ ಐಸ್ ಕ್ರೀಂ ತಿಂದಿದ್ದಲ್ಲದೇ ಸಾಕಷ್ಟು ಮೋಜು ಮಸ್ತಿ ಮಾಡಿದ್ದಾರೆ.

ತಮ್ಮ ಮುಂದಿನ ಚಿತ್ರ ‘ರೇಸ್ 3’ ಕೋಸ್ಟಾರ್ ಗಳ ಜೊತೆಗೆ ಸಮಯ ಕಳೆದಿದ್ದಾರೆ.  ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಪಾರ್ಟಿ ಕೂಡ  ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...