alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ವೇಳೆ ಗಾಯಗೊಂಡ ಸಲ್ಮಾನ್ ಖಾನ್

ಸಾಹಸ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಾಯಗೊಂಡಿದ್ದಾರೆ.

ಅಬುದಾಬಿಯಲ್ಲಿ ಸಲ್ಮಾನ್ ಅಭಿನಯದ ಬಹುನಿರೀಕ್ಷೆಯ ‘ಟೈಗರ್ ಜಿಂದಾ ಹೈ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಹಾಲಿವುಡ್ ಸಾಹಸ ನಿರ್ದೇಶಕ ಟಾಮ್ ಸ್ಟ್ರೂಥರ್ಸ್ ಸೈನ್ ಹಾಗೂ ಸಾಹಸ ಕಲಾವಿದರೊಂದಿಗೆ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಪಾಲ್ಗೊಂಡಿದ್ದ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಸಲ್ಮಾನ್ ಖಾನ್ ಆಯತಪ್ಪಿ ಬಿದ್ದಿದ್ದಾರೆ.

ಅವರಿಗೆ ಗಾಯಗಳಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವರು ಗಾಯಗೊಂಡಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇವು ಸಿನಿಮಾದ ಭಾಗವಾಗಿರುವ ಸಾಧ್ಯತೆ ಕೂಡ ಇದೆ.

‘ಏಕ್ ಥಾ ಟೈಗರ್’ 2012 ರಲ್ಲಿ ರಿಲೀಸ್ ಆಗಿ ಭಾರೀ ಯಶಸ್ಸು ಕಂಡಿತ್ತು. ಅದರ ಮುಂದುವರೆದ ಭಾಗವಾಗಿರುವ ‘ಟೈಗರ್ ಜಿಂದಾ ಹೈ’ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...