alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ‘ಭಾರತ್’ ಚಿತ್ರಕ್ಕೆ ಎದುರಾಯ್ತು ಹೊಸ ಕಂಟಕ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿ ಆನಂತರ ಷರತ್ತು ಬದ್ಧ ಜಾಮೀನು ನೀಡಿದ್ದ ಜೋಧ್ಪುರ್ ನ್ಯಾಯಾಲಯ, ವಿದೇಶಕ್ಕೆ ತೆರಳುವ ವೇಳೆ ಪ್ರತಿ ಬಾರಿಯೂ ನ್ಯಾಯಾಲಯದ ಅನುಮತಿ ಪಡೆಯುವುದು ಕಡ್ಡಾಯವೆಂದು ಹೇಳಿದೆ.

ತನ್ನ ಅನುಮತಿಯಿಲ್ಲದೆ ವಿದೇಶಕ್ಕೆ ಹಾರುವಂತಿಲ್ಲ ಅಂತ ನ್ಯಾಯಾಲಯ ಈ ಹಿಂದೆ ಅದೇಶಿಸಿದ್ದರಿಂದ ಸಲ್ಮಾನ್ ಖಾನ್ ಪರ ವಕೀಲರು, ಇದರಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿದೆ.

ಏಪ್ರಿಲ್ 7ರಂದು ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಗೆ ಜೋಧ್ಪುರ್ ನ್ಯಾಯಾಲಯ ಐದು ವರ್ಷಗಳ ಕಾಲ ಕಾರಾಗೃಹದ ಶಿಕ್ಷೆ ವಿಧಿಸಿತ್ತು. ಎರಡು ದಿನಗಳ ಸೆರೆವಾಸದ ಬಳಿಕ ಸಲ್ಮಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ತನ್ನ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು ಅನ್ನೋ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿತ್ತು.

ಆನಂತರದಲ್ಲಿ ಸಲ್ಮಾನ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಆದ್ರೆ ಈಗ ಸಿನಿಮಾದ ಚಿತ್ರೀಕರಣಕ್ಕಾಗಿ ಸಲ್ಮಾನ್ ಖಾನ್ ವಿದೇಶಕ್ಕೆ ತೆರಳಲೇಬೇಕಾಗಿರುವ ಅನಿವಾರ್ಯತೆ ಇದೆ. ಹಾಗಾಗಿ ಸಲ್ಮಾನ್ ಪರವಾಗಿ ವಕೀಲರಾದ ಮಹೇಶ್ ಬೋರಾ, ಪ್ರತಿ ಬಾರಿ ವಿದೇಶ ಪ್ರಯಾಣದ ವೇಳೆ ನ್ಯಾಯಾಲಯದ ಅನುಮತಿ ಕೋರುವ ವಿಚಾರದಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಆದ್ರೆ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಸಲ್ಮಾನ್ ಅಭಿನಯಿಸಬೇಕಾಗಿರುವ ‘ಭಾರತ್’ ಚಿತ್ರಕ್ಕೆ ಮತ್ತಷ್ಟು ವಿಘ್ನ ಎದುರಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...