alex Certify
ಕನ್ನಡ ದುನಿಯಾ       Mobile App
       

Kannada Duniya

ಮುಚ್ಚುಮರೆಯಿಲ್ಲದೆ ಸತ್ಯ ಒಪ್ಪಿಕೊಂಡಿದ್ದಾರೆ ಸಲ್ಮಾನ್

467955-salman-khan-new-11223

ಅಮೀರ್ ಖಾನ್ ರ ‘ದಂಗಲ್’ ಹಾಗೂ ಪ್ರಭಾಸ್ ಅಭಿನಯದ ‘ಬಾಹುಬಲಿ-2’ ಸಿನೆಮಾಗಳು ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ಅಳಿಸಿ ಹಾಕಿವೆ. ದಂಗಲ್ ಹಾಗೂ ಬಾಹುಬಲಿಯ ದಾಖಲೆಗಳನ್ನು ಚಿಂದಿ ಮಾಡೋದು ಅಷ್ಟು ಸುಲಭವಿಲ್ಲ. ಆದ್ರೆ ಈ ತಾಕತ್ತು ಬಾಲಿವುಡ್ ನ ಬಾಕ್ಸ್ ಫೀಸ್ ಕಿಂಗ್ ಸಲ್ಮಾನ್ ಖಾನ್ ಗಿದೆ.

ಹಾಗಂತ ಅಭಿಮಾನಿಗಳಿಗೇನೋ ಅನ್ನಿಸ್ತಿದೆ. ಆದ್ರೆ ಈ ಬಗ್ಗೆ ಸಲ್ಲು ಏನ್ಹೇಳಿದ್ದಾರೆ ಗೊತ್ತಾ? ಈ ದಾಖಲೆಗಳನ್ನೆಲ್ಲ ಅಳಿಸಿ ಹಾಕಲು ನನಗಿನ್ನೂ ಸಮಯ ಬೇಕು ಅಂತಾ ಪ್ರಾಮಾಣಿಕ ಉತ್ತರ ಕೊಟ್ಟಿದ್ದಾರೆ. ದಂಗಲ್ ಹಾಗೂ ಬಾಹುಬಲಿ ಎರಡೂ ಅತ್ಯದ್ಭುತ ಚಿತ್ರಗಳು. ಈ ಸಿನೆಮಾಗಳು ಮಾಡಿರುವ ಐತಿಹಾಸಿಕ ದಾಖಲೆಗಳ ಸಮೀಪಕ್ಕೆ ತಲುಪಲು ನನಗೆ ಸಮಯ ಬೇಕಾಗಲಿದೆ ಅಂತಾ ನೇರವಾಗಿಯೇ ಸಲ್ಲು ಒಪ್ಪಿಕೊಂಡಿದ್ದಾರೆ.

ಆದ್ರೆ ಅಸಾಧ್ಯ ಅಂತಾ ಸಲ್ಮಾನ್ ಹೇಳಿಲ್ಲ. ಯಾಕಂದ್ರೆ ‘ಟೈಗರ್ ಜಿಂದಾ ಹೈ’ ಹಾಗೂ ‘ಟ್ಯೂಬ್ ಲೈಟ್’ ಚಿತ್ರಗಳ ಮೇಲೆ ಸಲ್ಲುಗೆ ಅಪಾರ ನಿರೀಕ್ಷೆ ಇದೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದೇ ಗೆಲ್ಲುತ್ತವೆ ಎಂಬ ವಿಶ್ವಾಸವೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...