alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್, ಅಜಯ್ ಚಿತ್ರಕ್ಕೆ ಸಲ್ಮಾನ್ ಪ್ರೀತಿಯ ಸಂದೇಶ

29_10_2016-salman_aishajay

ಅಜಯ್ ದೇವಗನ್ ಹಾಗೂ ಐಶ್ವರ್ಯ ರೈ ನಡುವೆ ಸಲ್ಮಾನ್ ಖಾನ್ ಗಿರುವ ಸಂಬಂಧ ಬಹಳ ವಿಶೇಷವಾಗಿದೆ. ಅಜಯ್ ದೇವಗನ್ ‘ಶಿವಾಯ್’ ಹಾಗೂ ಐಶ್ ಅಭಿನಯದ ‘ಎ ದಿಲ್ ಹೇ ಮುಷ್ಕಿಲ್’ ನಿನ್ನೆ ತೆರೆ ಕಂಡಿದೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಸಾಧ್ಯತೆ ದಟ್ಟವಾಗಿದೆ. ಎರಡೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗ್ತಾ ಇದೆ.

ಈ ನಡುವೆ ಸಲ್ಮಾನ್ ಖಾನ್ ಎರಡೂ ಚಿತ್ರಗಳಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದಲ್ಲಿ ಸಲ್ಮಾನ್, ಐಶ್ ಹಾಗೂ ಅಜಯ್ ದೇವಗನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲಿಂದ ಅಜಯ್ ಹಾಗೂ ಸಲ್ಲು ಒಳ್ಳೆ ಸ್ನೇಹಿತರು. ಇನ್ನು ಐಶ್-ಸಲ್ಮಾನ್ ಬಗ್ಗೆ ಹೇಳಬೇಕಾಗಿಲ್ಲ. ಅವರಿಬ್ಬರ ಬಗ್ಗೆ ಇಡೀ ಜಗತ್ತಿಗೆ ಗೊತ್ತು. ಒಬ್ಬರಿಗೆ ವಿಶ್ ಮಾಡೋದು ಸರಿಯಾಗಲ್ಲ. ಹಾಗಾಗಿ ಎರಡೂ ಚಿತ್ರಗಳಿಗೆ ಟ್ವಿಟರ್ ನಲ್ಲಿ ಗುಡ್ ಲಕ್ ಹೇಳಿದ್ದಾರೆ ಸಲ್ಮಾನ್.

‘ಎ ದಿಲ್ ಹೇ ಮುಷ್ಕಿಲ್’ ಚಿತ್ರ ‘ಶಿವಾಯ್’ ಗೆ ದುಬಾರಿಯಾಗಿ ಪರಿಣಮಿಸಿದೆ ಎನ್ನಲಾಗ್ತಾ ಇದೆ. ಆದ್ರೆ ‘ಶಿವಾಯ್’ ಬಗ್ಗೆ ವಿಮರ್ಶಕರು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕ ಯಾರ ಬಾಳಲ್ಲಿ ದೀಪ ಬೆಳಗ್ತಾನೆ ಅನ್ನೋದು ಈ ವೀಕೆಂಡ್ ನಂತ್ರ ತಿಳಿಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...