alex Certify
ಕನ್ನಡ ದುನಿಯಾ       Mobile App
       

Kannada Duniya

ಫಸ್ಟ್ ಲುಕ್ ನಲ್ಲಿ ಸಲ್ಲು ಹಿಂಭಾಗ ತೋರಿಸೋದೇಕೆ?

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಿನಿಮಾ ಬರ್ತಿದೆ ಎಂದ್ರೆ ಅಭಿಮಾನಿಗಳು ಕುತೂಹಲದಿಂದ ಕಾಯ್ತಾರೆ. ರೇಸ್-3 ನಂತ್ರ ಸಲ್ಮಾನ್ ನಟನೆಯ ಭಾರತ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗ್ತಿದೆ.

ಭಾರತ್ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಆಗ್ಲೇ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಭಾರತ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎಲ್ಲ ಚಿತ್ರದಂತೆ ಈ ಚಿತ್ರದ ಫಸ್ಟ್ ಲುಕ್ ನಲ್ಲಿ ಕೂಡ ಸಲ್ಮಾನ್ ಹಿಂಭಾಗವನ್ನು ತೋರಿಸಿದ್ದಾರೆ. ಸಲ್ಮಾನ್ ಪ್ರತಿ ಚಿತ್ರದ ಫಸ್ಟ್ ಲುಕ್ ನಲ್ಲಿಯೂ ಹಿಂಭಾಗ ತೋರಿಸುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ನಿರ್ದೇಶಕ ಅಲಿ ಅಬ್ಬಾಸ್ ಹೇಳಿದ್ದಾರೆ.

ಅಲಿ ಅಬ್ಬಾಸ್ ಪ್ರಕಾರ, ಹಿಂಭಾಗ ತೋರಿಸುವುದು ಈಗಿನ ಟ್ರೆಂಡ್ ಅಂತೆ. ಈ ಟ್ರಿಕ್ ಸಕ್ಸಸ್ ನೀಡಿದೆ. ಇದೇ ಕಾರಣಕ್ಕೆ ಸಲ್ಮಾನ್ ಕೂಡ ಈ ಟ್ರಿಕ್ ಪಾಲನೆ ಮಾಡ್ತಿದ್ದಾರೆ. ಸಲ್ಮಾನ್ ಅಭಿನಯದ ಪ್ರತಿಯೊಂದು ಚಿತ್ರ ಸೂಪರ್ ಹಿಟ್. ಇದ್ರಲ್ಲಿ ಎರಡು ಮಾತಿಲ್ಲ. ಅನೇಕ ವರ್ಷಗಳ ನಂತ್ರ ಸಲ್ಮಾನ್ ಜೊತೆ ಪ್ರಿಯಾಂಕ ನೋಡಬೇಕೆಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದ್ರೆ ಸಲ್ಮಾನ್ ಜೊತೆ ಮತ್ತೊಮ್ಮೆ ಕತ್ರಿನಾ ನೋಡಲು ಜನರು ಇಷ್ಟಪಡ್ತಿದ್ದು, ಸಲ್ಮಾನ್ ಟ್ರಿಕ್ ಭಾರತ್ ಯಶಸ್ಸಿಗೆ ಕಾರಣವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...