alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ಯೂಬ್ಲೈಟ್ ಚಿತ್ರ ಪ್ರದರ್ಶನದ ವೇಳೆ ಪಟಾಕಿ ಸಿಡಿಸಿದ ಅಭಿಮಾನಿಗಳು

salman_1498623545_749x421

ಸಲ್ಮಾನ್ ಖಾನ್ ಅಭಿನಯದ ಟ್ಯೂಬ್ಲೈಟ್ ಚಿತ್ರ ಬಿಡುಗಡೆಯಾಗಿ ವಾರ ಕಳೆಯುತ್ತ ಬಂತು. ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೆ ಚಿತ್ರ ನಿಧಾನವಾಗಿ ಸಾಗ್ತಾ ಇದೆ. ಆದ್ರೆ ಸಲ್ಮಾನ್ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಮಾಲೆಗಾಂವ್ ಥಿಯೇಟರ್ ನಲ್ಲಿ ಚಿತ್ರ ಪ್ರದರ್ಶನದ ವೇಳೆ ಪಟಾಕಿ ಸಿಡಿಸಿ ಅಭಿಮಾನಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮುಂಬೈ ಮಾಲೆಗಾಂವ್ ನ ಮೋಹನ್ ಥಿಯೇಟರ್ ನಲ್ಲಿ ಸಲ್ಮಾನ್ ಅಭಿಮಾನಿಗಳು ಪಟಾಕಿ ಹಚ್ಚಿದ್ದಾರೆ. ಅಭಿಮಾನಿಗಳ ವಿರುದ್ಧ ಮೋಹನ್ ಥಿಯೇಟರ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಶಾರುಖ್ ಅಭಿನಯದ ರಾಯಿಸ್ ಚಿತ್ರ ಪ್ರದರ್ಶನದ ವೇಳೆಯೂ ಅಭಿಮಾನಿಗಳು ಥಿಯೇಟರ್ ನಲ್ಲಿ ಪಟಾಕಿ ಹಚ್ಚಿದ್ದರು.

ಟ್ಯೂಬ್ಲೈಟ್ ಚಿತ್ರವನ್ನು ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಗೆ ಹೋಲಿಸಲಾಗ್ತಾ ಇದೆ. ಆ ಚಿತ್ರ ಮೊದಲ ದಿನವೇ 102 ಕೋಟಿ ಗಳಿಕೆ ಕಂಡಿತ್ತು. ಆದ್ರೆ ಅತಿ ಹೆಚ್ಚು ಅಂದ್ರೆ 5550 ಥಿಯೇಟರ್ ಗಳಲ್ಲಿ ತೆರೆ ಕಂಡ ಟ್ಯೂಬ್ಲೈಟ್ ಚಿತ್ರ ನಾಲ್ಕು ದಿನಗಳಲ್ಲಿ ಕೇವಲ 84 ಕೋಟಿ ಗಳಿಕೆ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...