alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿತನದ ಬಗ್ಗೆ ಸಲ್ಮಾನ್ ಏನೇಳ್ತಾರೆ ಕೇಳಿ

salmank

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 50 ವರ್ಷವಾದರೂ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಜೀವನದಲ್ಲಿ ಹಲವಾರು ಏರಿಳಿತ ಕಂಡಿರುವ ಅವರಿಗೆ ಒಂಟಿತನದ ಭಯ ಕಾಡುತ್ತಿದೆಯಂತೆ. ಆದರೆ ಈ ಒಂಟಿತನದಲ್ಲಿಯೂ ಏನೋ ಒಂಥರಾ ಸುಖವಿದೆ ಎನ್ನುತ್ತಾರೆ ಅವರು.

ಸಲ್ಮಾನ್ ಖಾನ್, ಇಷ್ಟಪಟ್ಟ ಗೆಳತಿಯರೊಂದಿಗೆ ಮದುವೆಯಾಗಿದ್ದರೇ ವರ್ಷಗಳೇ ಕಳೆಯುತ್ತಿದ್ದವು. ಆದರೆ, ಸಲ್ಮಾನ್ ಸಿನಿಮಾ ಕೆರಿಯರ್ ನಲ್ಲಿ ಸಿಕ್ಕ ಯಶಸ್ಸು ಮದುವೆ ವಿಚಾರದಲ್ಲಿ ಸಿಗಲೇ ಇಲ್ಲ. ಹಾಗೆಂದು ಅವರೇನು ಬೇಜಾರಾಗಿಲ್ಲ. ಒಂಟಿಯಾಗಿರುವುದು ಭಯವೆನಿಸಿದರೂ ಅದರಲ್ಲೇನೋ ಮಜಾ ಇದೆ ಎಂದು ಹೇಳಿಕೊಂಡಿದ್ದಾರೆ. ಸಲ್ಮಾನ್ ಇತ್ತೀಚೆಗೆ ‘ಪ್ರೇಮ್ ರತನ್ ಧನ್ ಪಾಯೋ’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅದರಲ್ಲಿ ನಟಿಸಿದ್ದ ಸೋನಂ ಕಪೂರ್ ‘ನೀರಜಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ನೀರಜಾ’ ಚಿತ್ರದ ಆನ್ ಲೈನ್ ಕ್ಯಾಂಪೇನ್ ‘ಫಿಯರ್ ವರ್ಸಸ್ ನೀರಜಾ’ ವಿಡಿಯೋದಲ್ಲಿ ಸಲ್ಮಾನ್ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದು, ನನಗಿನ್ನು ಮದುವೆಯಾಗಿಲ್ಲ ಎಂಬುದು ಭಯ ತರಿಸುವ ವಿಚಾರವಾದರೂ, ಅದು ಇಷ್ಟವಾಗುತ್ತದೆ. ಅದನ್ನು ಇನ್ನಷ್ಟು ದಿನ ಅನುಭವಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...