alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಜೊತೆ ಮತ್ತೆ ಕಾಣಿಸಿಕೊಂಡ ನಟಿ ರಂಭಾ…!

ಸಲ್ಮಾನ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದ ನಟಿ ರಂಭಾ ಮತ್ತೆ ಸಲ್ಲು ಜೊತೆ ಕಾಣಿಸಿಕೊಂಡಿದ್ದಾರೆ. ಯಾವ ಚಿತ್ರಕ್ಕೆ ಇವರು ಮತ್ತೆ ಸಹಿ ಮಾಡಿದ್ರು ಎಂದು ತಲೆ ಕೆಡಿಸಿಕೊಳ್ಳಬೇಡಿ.

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸದ್ಯ ದಬಂಗ್​ ಪ್ರವಾಸದಲ್ಲಿದ್ದಾರೆ. ಕೆನಡಾದ ಟೊರೆಂಟೊದಲ್ಲಿ ನಡೆಯುತ್ತಿದ್ದ ಶೋ ಒಂದರಲ್ಲಿ ರಂಭಾ, ಕುಟುಂಬ ಸಮೇತರಾಗಿ ಬಂದಿದ್ದರು. ಅಲ್ಲದೆ ಸ್ಟೇಜ್​ ಹಿಂದೆ ಸಲ್ಮಾನ್​ ಖಾನ್ ​​ರನ್ನು ಭೇಟಿ ಮಾಡಿದ್ರು. 39 ವರ್ಷದ ನಟಿ ರಂಭಾ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಾ ಇದೆ. ಈ ಫೋಟೋ ಅಭಿಮಾನಿಗಳಿಗೆ 90 ರ ದಶಕದ ನೆನಪುಗಳನ್ನು ಮಾಡಿಕೊಟ್ಟಿದೆ.

ರಂಭಾ 90 ರ ದಶಕದಲ್ಲಿ ಖ್ಯಾತ ನಟಿ. ಇವರು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿದ್ದಾರೆ. ರಂಭಾ ಸುಮಾರು 100 ಕ್ಕೂ ಅಧಿಕ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 2010 ರಲ್ಲಿ ವಿವಾಹವಾದ ಬಳಿಕ ರಂಭಾ ಚಿತ್ರರಂಗದಿಂದ ದೂರ ಸರಿದಿದ್ದು, ಈ ಹಿಂದೆ ಸಲ್ಮಾನ್ ಖಾನ್ ರ ‘ಜುಡ್ವಾ’ ಚಿತ್ರದಲ್ಲೂ ಅಭಿನಯಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...