alex Certify
ಕನ್ನಡ ದುನಿಯಾ       Mobile App
       

Kannada Duniya

ದಬಾಂಗ್ ಹುಡುಗನ ಮನೆಯಲ್ಲಿ ಬ್ರೇಕ್ ಅಪ್ ಬಿರುಗಾಳಿ

sohail-khan-and-seema-sachdev

ಬಾಲಿವುಡ್ ನಟ ಸಲ್ಮಾನ್ ಖಾನ್ ಕುಟುಂಬದ ಮೇಲೆ ಯಾರದ್ದೋ ಕಣ್ಣು ಬಿದ್ದಂತಿದೆ. ಸುಂದರ ಕುಟುಂಬ ಒಡೆದು ಹೋಗ್ತಾ ಇವೆ. ಒಬ್ಬರ ನಂತರ ಒಬ್ಬರ ಬ್ರೇಕ್ ಅಪ್ ಸುದ್ದಿ ಬಾಲಿವುಡ್ ನಲ್ಲಿ ಗುಸುಗುಸು ಪಿಸುಪಿಸುಗೆ ಕಾರಣವಾಗಿದೆ.

ಮೊದಲು ಸಲ್ಮಾನ್ ದತ್ತು ಸಹೋದರಿ ಶ್ವೇತ ಹಾಗೂ ನಟ ಪುಲ್ಕಿತ್ ಸಾಮ್ರಾಟ್ ಬೇರೆಯಾಗುತ್ತಿರುವ ಸುದ್ದಿ ಹರಡಿತ್ತು. ಮೊನ್ನೆಯಷ್ಟೇ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಬೇರೆಯಾಗ್ತಿದ್ದಾರೆಂಬ ಮಾತು ಕೇಳಿ ಬಂದಿದೆ. ಈಗ ಸಲ್ಮಾನ್ ಇನ್ನೊಬ್ಬ ಸಹೋದರನ ಸರದಿ.

ಸೊಹೈಲ್ ಖಾನ್ ಮತ್ತು ಪತ್ನಿ ಸೀಮಾ ವಿಚ್ಚೇದನ ಪಡೆಯುತ್ತಿದ್ದಾರೆ ಎನ್ನಲಾಗ್ತಾ ಇದೆ. ಈ ಹಿಂದೆ ದಂಪತಿ ಮಧ್ಯೆ ಹೂಮಾ ಖುರೈಶಿ ಪ್ರವೇಶವಾಗಿದೆ ಎನ್ನಲಾಗ್ತಾ ಇತ್ತು. ಆದ್ರೆ ಖುದ್ದು ಹೂಮಾ, ಸೊಹೈಲ್ ತನ್ನ ಸಹೋದರನಿದ್ದಂತೆ ಎಂದು ಟ್ವೀಟ್ ಮಾಡಿ ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದ್ದಳು.

ಆದ್ರೆ ಈಗ ಮತ್ತೆ ಇಬ್ಬರೂ ಬೇರೆಯಾಗಿದ್ದಾರೆಂಬ ಸುದ್ದಿ ಇದೆ. ಸೀಮಾರನ್ನು ಒಪ್ಪಿಕೊಂಡು ಸಲ್ಮಾನ್ ಕುಟುಂಬ ಮನೆ ತುಂಬಿಸಿಕೊಂಡಿತ್ತು. ಈಗ ಸೀಮಾನೇ ಸೋಹೆಲ್ ಗೆ ಮನೆ ಹೊರಗಿನ ದಾರಿ ತೋರಿಸಿದ್ದಾರಂತೆ. ಒಂದು ನಿರ್ಧಾರದೊಂದಿಗೆ ಮನೆಗೆ ವಾಪಸ್ ಬರುವಂತೆ ವಾರ್ನಿಂಗ್ ಕೂಡ ಮಾಡಿದ್ದಾರಂತೆ.

ಸಲ್ಮಾನ್ ಕುಟುಂಬ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದೆ. ಎಲ್ಲರೂ ಒಟ್ಟಿಗೆ ಸಂತೋಷದಿಂದ ವಾಸಿಸುತ್ತಿದ್ದರು. ಆದ್ರೆ ಈಗ ಒಂದಾದ ಮೇಲೆ ಒಂದು ಬ್ರೇಕ್ ಅಪ್ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...