alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ಸಿನೆಮಾ ಟೀಸರ್ ಗೆ ಮನಸೋತ ಸಲ್ಮಾನ್

salman zxc

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕನ್ನಡ ಸಿನೆಮಾ ಒಂದರ ಟೀಸರ್ ನೋಡಿ ಮೆಚ್ಚಿದ್ದಾರೆ. ಅಲ್ಲದೇ, ಈ ಚಿತ್ರದ ಸ್ಟೋರಿ ಲೈನ್ ಕೇಳಿಯೇ ಅವರು ಫಿದಾ ಆಗಿದ್ದು, ಸಾಧ್ಯವಾದರೆ, ರಿಮೇಕ್ ಕೂಡ ಮಾಡಲಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಮೆಚ್ಚಿದ ಕನ್ನಡ ಸಿನೆಮಾ ಯಾವುದೆಂದು ತಿಳಿಯಲು ಮುಂದೆ ಓದಿ.

ಧನಂಜಯ್, ಸಂಚಿತಾ ಶೆಟ್ಟಿ ಅಭಿನಯದ ‘ಬದ್ಮಾಶ್’ ಟೀಸರ್ ಈಗಾಗಲೇ ರಿಲೀಸ್ ಆಗಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಇದು ಚಿತ್ರದ ನಿರ್ಮಾಪಕ ರವಿ ಕಶ್ಯಪ್ ಅವರ ಮುಂಬೈ ಸ್ನೇಹಿತರ ಮೂಲಕ ಸಲ್ಮಾನ್ ಖಾನ್ ಅವರನ್ನೂ ತಲುಪಿದೆ. ಟೀಸರ್ ನೋಡಿದ ಸಲ್ಮಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹಿತರು ಯಾವುದೋ ಕಾರಣ ಹೇಳಿ ರವಿ ಕಶ್ಯಪ್ ಅವರನ್ನು ಮುಂಬೈಗೆ ಕರೆಸಿಕೊಂಡಿದ್ದು, ಅಲ್ಲಿಗೆ ಹೋದ ನಂತರ ಸಲ್ಮಾನ್ ಖಾನ್ ಭೇಟಿ ಮಾಡಿಸಿದ್ದಾರೆ. ಕತೆಯನ್ನೂ ಕೇಳಿ ಖುಷಿಪಟ್ಟ ಸಲ್ಮಾನ್, ಚಿತ್ರದ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.

ಸಿನೆಮಾ ನೋಡಿದ ಬಳಿಕ ರಿಮೇಕ್ ಮಾಡುವ ಬಗ್ಗೆ ತೀರ್ಮಾನಿಸಲಿದ್ದಾರೆ. ಸಲ್ಮಾನ್, ಸೌತ್ ಇಂಡಿಯಾ ಸಿನೆಮಾಗಳನ್ನು ರಿಮೇಕ್ ಮಾಡಿ ಸಕ್ಸಸ್ ಕಂಡವರು. ಇದೀಗ ಕನ್ನಡ ಚಿತ್ರವೊಂದನ್ನು ಮೆಚ್ಚಿದ್ದು, ಇದು ಚಿತ್ರ ತಂಡದ ಖುಷಿಯನ್ನು ಹೆಚ್ಚಿಸಿದೆ. ‘ಬದ್ಮಾಶ್’ ರೀ ರೆಕಾರ್ಡಿಂಗ್ ಹಂತದಲ್ಲಿದ್ದು, ಆದಷ್ಟು ಬೇಗ ಪೂರ್ಣಗೊಳಿಸಿ ಸಲ್ಮಾನ್ ಅವರಿಗೆ ತೋರಿಸುವುದಾಗಿ ರವಿ ಕಶ್ಯಪ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...