alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಕಲ್ ಆದ ಸಲ್ಮಾನ್ ಖಾನ್, ಕಾರಣ ಗೊತ್ತಾ..?

sallu 23

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಮಲೈಕಾ ಆರೋರಾ ದಂಪತಿ ತಮ್ಮ 17 ವರ್ಷಗಳ ದಾಂಪತ್ಯ ಜೀವನದಿಂದ ದೂರವಾಗುತ್ತಿದ್ದು, ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ.

ಈ ಬೆಳವಣಿಗೆಯಿಂದ ಬೇಸರದಲ್ಲಿದ್ದ ಕುಟುಂಬದಲ್ಲಿ ಸಂಭ್ರಮ ಮೂಡಿದೆ. ಅದಕ್ಕೆ ಕಾರಣ, ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈನ ಸಿಟಿ ಆಸ್ಪತ್ರೆಯಲ್ಲಿ ಅರ್ಪಿತಾ ಖಾನ್ ಅವರಿಗೆ ಹೆರಿಗೆಯಾಗಿದ್ದು, ಗಂಡುಮಗು ಜನಿಸಿದೆ. ಇದು ಕುಟುಂಬ ಸದಸ್ಯರ ಸಂಭ್ರಮವನ್ನು ಹೆಚ್ಚಿಸಿದೆ. ತಮಗೆ ಮಗುವಾದ ಸಂತಸವನ್ನು ಅರ್ಪಿತಾ ಪತಿ ಆಯೂಷ್ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2014ರ ನವೆಂಬರ್ ನಲ್ಲಿ ಹೈದರಾಬಾದ್ ನಲ್ಲಿ ಅರ್ಪಿತಾ ಖಾನ್ ಹಾಗೂ ಆಯೂಷ್ ಖಾನ್ ಅವರ ಮದುವೆಯಾಗಿತ್ತು. ಇದೀಗ ಅರ್ಪಿತಾಗೆ ಗಂಡು ಮಗು ಜನಿಸಿದ್ದು, ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಪುತ್ರನ ಫೋಟೋ ಹಾಕಿದ ಆಯೂಷ್ ನಮ್ಮ ಮನೆಗೆ ರಾಜಕುಮಾರ ಬಂದಿದ್ದಾನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...