alex Certify
ಕನ್ನಡ ದುನಿಯಾ       Mobile App
       

Kannada Duniya

“ನನಗೆ ಹುಡುಗಿ ಸಿಕ್ಕಳು’’- ಸಲ್ಮಾನ್ ಟ್ವಿಟ್

ಬಾಲಿವುಡ್ ನ ಬ್ಯಾಚ್ಯುಲರ್ ಸಲ್ಮಾನ್ ಖಾನ್ ಟ್ವೀಟರ್ ಒಂದು ಸದ್ದು ಮಾಡ್ತಿದೆ. ಮಂಗಳವಾರ ಮಧ್ಯಾಹ್ನ 12.15ಕ್ಕೆ ಸಲ್ಮಾನ್ ಖಾನ್ ಮಾಡಿರುವ ಟ್ವೀಟರ್ ಅಭಿಮಾನಿಗಳ ಮನದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ನನಗೆ ಹುಡುಗಿ ಸಿಕ್ಕಳು ಎಂದು ಸಲ್ಮಾನ್ ಟ್ವಿಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಈ ಟ್ವಿಟ್ ನ ಒಳ ಅರ್ಥವೇನು ಎಂಬುದು ಯಾರಿಗೂ ತಿಳಿದಿಲ್ಲ. ಸಲ್ಮಾನ್ ಖಾನ್ ಮದುವೆ ಅನೇಕ ವರ್ಷಗಳಿಂದ ಚರ್ಚೆಯ ವಿಷ್ಯವಾಗಿದೆ. ಸಲ್ಮಾನ್ ಖಾನ್ ಮದುವೆಗೆ ಎಲ್ಲರೂ ಕಾಯ್ತಿದ್ದಾರೆ. ಈ ಮಧ್ಯೆ ಸಲ್ಮಾನ್ ಖಾನ್ ಈ ಟ್ವಿಟ್ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಸಲ್ಮಾನ್ ಶೀಘ್ರದಲ್ಲಿಯೇ ಮದುವೆಯಾಗಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಈ ಟ್ವಿಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಸಾವಿರಾರು ಮಂದಿ ಲೈಕ್ ಹಾಗೂ ರೀಟ್ವಿಟ್ ಮಾಡುತ್ತಿದ್ದಾರೆ. ಕೆಲವರು ಹೊಸ ಚಿತ್ರಕ್ಕೆ ಹುಡುಗಿ ಸಿಕ್ಕಳಾ ಎಂದ್ರೆ ಮತ್ತೆ ಕೆಲವರು ಮದುವೆಯಾಗ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಸಲ್ಮಾನ್ ಖಾನ್ ಯಾವುದಕ್ಕೂ ಉತ್ತರ ನೀಡಿಲ್ಲ. ಒಂದು ವೇಳೆ ಸಲ್ಮಾನ್ ಮದುವೆಗೆ ಹುಡುಗಿ ಸಿಕ್ಕಿದ್ದರೆ ಬಾಲಿವುಡ್ ನಲ್ಲಿ ಇದೊಂದು ಬಹುದೊಡ್ಡ ಸುದ್ದಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...