alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ಪರದೆ ಮೇಲೆ ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ ಶಾರುಕ್-ಸಲ್ಮಾನ್

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಶಾರುಕ್ ಖಾನ್ ಶೀಘ್ರದಲ್ಲಿ ಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ರೇಸ್-3 ಚಿತ್ರ ಬಿಡುಗಡೆ ಜೊತೆಗೆ ಆನಂದ್ ಎಲ್ ರಾಯ್ ಝೀರೋ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದ ಟೀಸರ್ ನಲ್ಲಿ ಶಾರುಕ್ –ಸಲ್ಮಾನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಟೀಸರ್ ನ ಒಂದು ದೃಶ್ಯದಲ್ಲಿ ಶಾರುಕ್-ಸಲ್ಮಾನ್ ಬಾಕ್ಸಿಂಗ್ ರಿಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಯೊಂದರ ಪ್ರಕಾರ ಬಾಕ್ಸಿಂಗ್ ರಿಂಗ್ ನಲ್ಲಿ ಇಬ್ಬರು ಕಲಾವಿದರು ಡಾನ್ಸ್ ಮಾಡಲಿದ್ದಾರಂತೆ. ಮಂಗಳವಾರ ವಿತರಕರು ಹಾಗೂ ಪ್ರದರ್ಶಕರಿಗಾಗಿ ಟೀಸರ್ ಪ್ರದರ್ಶನ ನಡೆಯಿತು.

ಟೀಸರ್ ತುಂಬಾ ಚಿಕ್ಕದಿದೆಯಂತೆ. ಒಂದು ನಿಮಿಷ 15 ಸೆಕೆಂಡಿನ ಟೀಸರ್ ಇದಾಗಿದ್ದು, ಆದ್ರೆ ಪ್ರೇಕ್ಷಕರ ಮನ ಮುಟ್ಟಲಿದೆ ಎಂದು ಮೂಲಗಳು ಹೇಳಿವೆ. ಈದ್ ಸಂದರ್ಭದಲ್ಲಿ ಝೀರೋ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಚಿತ್ರ ದೊಡ್ಡ ಕಲೆಕ್ಷನ್ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ತಯಾರಕರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...