alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಸಲ್ಲು-ಮೋನಿ ಈ ಫೋಟೋ

bigg-boss-11

ಕಲರ್ಸ್ ನ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ವಾಪಸ್ ಬರ್ತಿದೆ. ಇದಕ್ಕೆ ಸಂಬಂಧಿಸಿದಂತೆ ತಯಾರಿ ಜೋರಾಗಿ ನಡೆಯುತ್ತಿದೆ. ಸಲ್ಮಾನ್ ಖಾನ್ ‘ದಿ ಟೈಗರ್ ಜಿಂದಾ ಹೇ’ ಚಿತ್ರದ ಶೂಟಿಂಗ್ ಮುಗಿಸಿ ಆದಷ್ಟು ಬೇಗ ವಾಪಸ್ ಆಗಲಿದ್ದಾರೆ. ಸಲ್ಮಾನ್ ಬರ್ತಾ ಇದ್ದಂತೆ ಪ್ರೋಮೋ ಚಿತ್ರೀಕರಣ ಪೂರ್ಣಗೊಳಿಸಲಿದ್ದಾರೆ.

ಈ ಮಧ್ಯೆ ಸಲ್ಮಾನ್ ಖಾನ್ ಹಾಗೂ ನಟಿ ಮೋನಿ ರಾಯ್ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೋಮೋ ಶೂಟಿಂಗ್ ವೇಳೆ ಕ್ಲಿಕ್ ಮಾಡಿದ ಈ ಫೋಟೋವನ್ನು ಸಲ್ಮಾನ್ ಫ್ಯಾನ್ ಕ್ಲಬ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಎಲ್ಲರೂ ಇಂಡಿಯಾದ ಜರ್ಸಿ ಧರಿಸಿದ್ದಾರೆ. ಒಂದು ಫ್ರೋಮೋ ಶೂಟ್ ಆಗಿದೆ ಎನ್ನಲಾಗ್ತಾ ಇದೆ.

ಬಿಗ್ ಬಾಸ್ 11ನೇ ಆವೃತ್ತಿ ಸ್ವಲ್ಪ ಭಿನ್ನವಾಗಿರಲಿದೆ. ಕುಟುಂಬಕ್ಕೆ ಮಹತ್ವ ನೀಡಲಾಗುವುದು ಎನ್ನಲಾಗ್ತಾ ಇದೆ. ಅಂದ್ರೆ  ಈ ಬಾರಿ ಸಹೋದರ-ಸಹೋದರಿ, ತಾಯಿ-ಮಗಳಂತಹ ಜೋಡಿ ಬಿಗ್ ಬಾಸ್ ಗೆ ಬರಲಿದ್ದಾರೆಂದು ಮೂಲಗಳು ಹೇಳ್ತಾ ಇವೆ. ಪ್ರೋಮೋ ಬಂದ ನಂತ್ರವೇ ಈ ಬಾರಿಯ ಶೋ ಹೇಗಿರಲಿದೆ ಎಂಬುದು ಗೊತ್ತಾಗಲಿದೆ. ಹಾಗೆ ಯಾರ್ಯಾರು ಬರಲಿದ್ದಾರೆಂಬುದನ್ನು ಊಹಿಸಲು ಸಾಧ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...