alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲು-ಕತ್ರಿನಾಗೆ ಅಭಿಮಾನಿಗಳಿಂದ ಈ ಸಲಹೆ

ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಟೈಗರ್ ಜಿಂದಾ ಹೇ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಬರ್ತಿದ್ದಾರೆ. ಸಲ್ಮಾನ್ ಹಾಗೂ ಕತ್ರಿನಾ ಜೋಡಿ ಸದ್ಯ ಗ್ರೀಸ್ ನಲ್ಲಿ ಚಿತ್ರದ ಶೂಟಿಂಗ್ ಮಾಡ್ತಿದ್ದಾರೆ. ಅಭಿಮಾನಿಗಳಿಗಾಗಿ ಜೋಡಿ, ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾರೆ.

ಕತ್ರಿನಾ ಹಾಗೂ ಸಲ್ಮಾನ್ ಒಟ್ಟಿಗಿರುವ ಫೋಟೋ ನೋಡಿ ಅಭಿಮಾನಿಗಳು ಮದುವೆಯಾಗುವಂತೆ ಸಲಹೆ ನೀಡಿದ್ದಾರೆ. ಅಭಿಮಾನಿಗಳೊಂದೇ ಅಲ್ಲ ಸಲ್ಮಾನ್ ತಂಗಿ ಅರ್ಪಿತಾಗೆ ಕೂಡ ಈ ಫೋಟೋ ಇಷ್ಟವಾಗಿದೆ. ಹಾಗಾಗಿ ಇದನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ.

ಸಲ್ಮಾನ್ ಹಾಗೂ ಕತ್ರಿನಾ ಟೈಗರ್ ಜಿಂದಾ ಹೇ ಚಿತ್ರದ ಕೊನೆ ಹಾಡಿನ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಚಿತ್ರ ಡಿಸೆಂಬರ್ 22ರಂದು ತೆರೆಗೆ ಬರುವ ಸಾಧ್ಯತೆಯಿದೆ. ಸಲ್ಮಾನ್ ಬಾಲಿವುಡ್ ನ ಬ್ಯಾಚುಲರ್. ಸಲ್ಮಾನ್ ಮದುವೆ ಮೇಲೆ ಎಲ್ಲರ ಕಣ್ಣಿದೆ. ಈಗಾಗಲೇ ಪ್ರೀತಿಸಿ ಮದುವೆ ಹಂತಕ್ಕೆ ಬಂದು ದೂರವಾದ ಜೋಡಿ ಮತ್ತೆ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ತಿದ್ದಾರೆ. ಖಾಸಗಿ ಬದುಕಿನಲ್ಲೂ ಸಲ್ಮಾನ್-ಕತ್ರಿನಾ ಒಂದಾಗಿ ಮದುವೆ ಮಾಡಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...