alex Certify
ಕನ್ನಡ ದುನಿಯಾ       Mobile App
       

Kannada Duniya

ವಿತರಕರಿಗೆ ಕೋಟಿ ಕೋಟಿ ಪರಿಹಾರ ಕೊಡ್ತಿದ್ದಾರೆ ಸಲ್ಲು

salman

ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಆಗಿದೆ. ಇದರಿಂದ ಕೈಸುಟ್ಟುಕೊಂಡವರು ವಿತರಕರು. ಡಿಸ್ಟ್ರಿಬ್ಯೂಟರ್ ಗಳಿಗೆ ಕೋಟಿ ಕೋಟಿ ನಷ್ಟವಾಗಿದೆ. ಇದಕ್ಕೆ ಸಲ್ಲು ಪರಿಹಾರ ಕೊಡಬೇಕು ಅಂತಾನೂ ವಿತರಕರು ಮತ್ತು ನಿರ್ಮಾಪಕರು ಪಟ್ಟು ಹಿಡಿದಿದ್ರು.

ಇದೀಗ ಅವರೆಲ್ಲರ ಬೇಡಿಕೆಗೆ ಸಲ್ಮಾನ್ ಖಾನ್ ಮಣಿದಿದ್ದಾರೆ. ಟ್ಯೂಬ್ ಲೈಟ್ ಸೋಲಿನಿಂದ ವಿತರಕರಿಗಾದ ನಷ್ಟ ಭರಿಸಲು ಸಲ್ಲು ಒಪ್ಪಿಕೊಂಡಿದ್ದು, 55 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ರ ಟ್ಯೂಬ್ ಲೈಟ್ ಸಿನೆಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ರಂಜಾನ್ ಸಮಯದಲ್ಲೇ ಚಿತ್ರವನ್ನು ರಿಲೀಸ್ ಕೂಡ ಮಾಡಲಾಗಿತ್ತು. ಆದ್ರೆ ಪ್ರೇಕ್ಷಕರು ಮಾತ್ರ ಟ್ಯೂಬ್ ಲೈಟ್ ಚಿತ್ರ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ ಗೆ ಬಂದಿಲ್ಲ.

ಪರಿಣಾಮ ಚಿತ್ರ ಸೋತಿದ್ದು, ಕೇವಲ 114.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದ್ರೆ ಈ ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಸಲ್ಲು, ಅಲಿ ಅಬ್ಬಾಸ್ ಜಫರ್ ನಿರ್ದೇಶನದ ‘ಟೈಗರ್ ಜಿಂದಾ ಹೈ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...