alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಖಾನ್ ಅಂದ್ರೆ ಸಲ್ಮಾನ್ ಗೇಕೆ ದ್ವೇಷ…?

indiatv4f8a93_salman-aamir

ಹಾವು ಮುಂಗುಸಿಯಂತಿದ್ದ ನಟ ಸಲ್ಮಾನ್ ಖಾನ್ ಹಾಗೂ ಶಾರೂಕ್ ಖಾನ್ ಈಗ ಒಂದಾಗಿದ್ದಾರೆ. ಆದ್ರೀಗ ಅಮೀರ್ ಖಾನ್ ಹಾಗೂ ಸಲ್ಮಾನ್ ಮಧ್ಯೆ ಸ್ನೇಹ ಹಳಸಿದ್ಯಾ ಅನ್ನೋ ಅನುಮಾನ ಅಭಿಮಾನಿಗಳಿಗೆ.

ಇದಕ್ಕೆ ಕಾರಣ ಸಲ್ಲು, ಅಮೀರ್ ಅಭಿನಯದ ‘ದಂಗಲ್’ ಚಿತ್ರವನ್ನು ನಿರ್ಲಕ್ಷಿಸಿದ್ದು. ಇಬ್ಬರ ನಡುವಣ ಗೆಳೆತನ ಮುರಿದು ಬಿದ್ದಿದೆ ಅಂತಾನೇ ಎಲ್ರೂ ಅಂದುಕೊಂಡಿದ್ರು. ಈ ಊಹಾಪೋಹಕ್ಕೆಲ್ಲ ಖುದ್ದು ಸಲ್ಮಾನ್ ಸ್ಪಷ್ಟನೆ ನೀಡಿದ್ದಾರೆ.

ಶಾಕಿಂಗ್ ವಿಚಾರ ಏನಂದ್ರೆ ಸಲ್ಲು, ಅಮೀರ್ ಖಾನ್ ರನ್ನು ದ್ವೇಷಿಸ್ತಾರಂತೆ. ಹೀಗಂತ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ ವೈಯಕ್ತಿಕವಾಗಿ ಅಮೀರ್ ನನಗೆ ಒಳ್ಳೆಯ ಫ್ರೆಂಡ್, ವೃತ್ತಿಪರವಾಗಿ ನಾನು ಅವರನ್ನು ದ್ವೇಷಿಸ್ತೀನಿ ಅಂತಾ ಸಮರ್ಥನೆ ಬೇರೆ ಕೊಟ್ಟಿದ್ದಾರೆ.

ಇದಕ್ಕೆ ಕಾರಣ ಇಷ್ಟೆ, ಸಲ್ಮಾನ್ ಖಾನ್ ಕುಟುಂಬದವರೆಲ್ಲ ಒಟ್ಟಾಗಿ ನಿನ್ನೆ ‘ದಂಗಲ್’ ಚಿತ್ರ ವೀಕ್ಷಿಸಿದ್ದಾರಂತೆ. ‘ದಂಗಲ್’ ಸಲ್ಮಾನ್ ರ ‘ಸುಲ್ತಾನ್’ ಸಿನಿಮಾಕ್ಕಿಂತ್ಲೂ ಅದ್ಭುತವಾಗಿದೆ ಅನ್ನೋದು ಅವರ ಅಭಿಪ್ರಾಯ. ಇದನ್ನು ಕೇಳಿ ಹೊಟ್ಟೆಕಿಚ್ಚು ಪಟ್ಕೊಂಡಿರೋ ಸಲ್ಮಾನ್, ಐ ಹೇಟ್ ಯೂ ಅಮೀರ್ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...