alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಲ್ ಚಿತ್ರ ನೋಡಿ ಸಲ್ಮಾನ್ ಹೇಳಿದ್ದೇನು…?

Indian Bollywood actor Salman Khan (2R) celebrates and wishes his fans Ramzan Eid Mubarak at his residence in Mumbai on July 18, 2015. AFP PHOTO (Photo credit should read STR/AFP/Getty Images)

ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಬಾಲಿವುಡ್ ನಲ್ಲಿ ಸದ್ದು ಮಾಡ್ತಾ ಇದೆ. ಅಮೀರ್ ಗೆ ಅಭಿನಂದನೆಗಳ ಸುರಿಮಳೆಯಾಗ್ತಾ ಇದೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಅಮೀರ್ ಅಭಿನಯವನ್ನು ಮನಬಿಚ್ಚಿ ಶ್ಲಾಘಿಸಿದ್ದಾರೆ ಸಲ್ಮಾನ್.

ಸಲ್ಮಾನ್ ಗೆ ಚಿತ್ರ ನೋಡುವಂತೆ ಅಮೀರ್ ಹೇಳಿದ್ದರು. ಮಾತಿಗೆ ತಪ್ಪದ ಸಲ್ಮಾನ್ ‘ದಂಗಲ್’ ಚಿತ್ರ ವೀಕ್ಷಿಸಿದ್ದಾರೆ. ಥಿಯೇಟರ್ ನಿಂದ ಹೊರ ಬರ್ತಾ ಇದ್ದಂತೆ ಸಲ್ಮಾನ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರ ನೋಡದೇ ನಾನು ಈ ಮೊದಲು ಟ್ವೀಟರ್ ಮಾಡಿದ್ದೆ. ಈಗ ಚಿತ್ರ ನೋಡಿ ಬಂದಿದ್ದೇನೆ. ಅಮೀರ್ ‘ಲಗಾನ್’ ತಮ್ಮ ವೃತ್ತಿಯ ಅತ್ಯುತ್ತಮ ಚಿತ್ರ ಎಂದಿದ್ದಾರೆ. ಆದ್ರೆ ನನ್ನ ಪ್ರಕಾರ ‘ದಂಗಲ್’, ಅಮೀರ್ ವೃತ್ತಿ ಜೀವನದ ಅತ್ಯುತ್ತಮ ಚಿತ್ರ ಎಂದಿದ್ದಾರೆ ಸಲ್ಮಾನ್.

ಚಿತ್ರದಲ್ಲಿ ಗೀತಾ ಹಾಗೂ ಬಬಿತಾ ಪಾತ್ರದಲ್ಲಿ ಕಾಣಿಸಿಕೊಂಡು ನಾಲ್ವರು ಹುಡುಗಿಯರ ಅಭಿನಯವನ್ನೂ ಹೊಗಳಿದ್ದಾರೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ಯಶಸ್ಸು ಕಾಣುವ ಚಿತ್ರ ಇದಾಗಲಿದೆ ಎಂದು ಸಲ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...