alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲೂ ಸಲ್ಮಾನ್ ಸೆಲ್ಫಿಗೆ ಮುಗಿಬಿದ್ದ ಸಿಬ್ಬಂದಿ

ಕೃಷ್ಣಮೃಗ ಬೇಟಿ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿರುವ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಎರಡು ದಿನಗಳಿಂದ ಜೈಲಿನಲ್ಲಿದ್ದಾರೆ. ಶಿಕ್ಷೆಗೊಳಗಾಗಿರುವ ಸಲ್ಮಾನ್ ಗೆ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಜೈಲಿನ ಒಳಗೂ ಸಲ್ಮಾನ್ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ.

ಜೋದ್ಪುರ ಜೈಲಿನಲ್ಲಿರುವ ಸಲ್ಮಾನ್ ಖಾನ್ ಜೈಲಾಧಿಕಾರಿಗಳು ಹಾಗೂ ಅವ್ರ ಕುಟುಂಬಸ್ಥರಿಗೆ ಆಟೋಗ್ರಾಫ್ ನೀಡಿದ್ದಾರೆ. ಅವ್ರ ಜೊತೆ ಸೆಲ್ಫಿ ಕೂಡ ತೆಗೆಸಿಕೊಂಡಿದ್ದಾರೆ. ಜೈಲಿನ ಸಿಬ್ಬಂದಿ ನಿರಂತರವಾಗಿ ಸಲ್ಮಾನ್ ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಕುಟುಂಬಸ್ಥರು, ಸಂಬಂಧಿರು, ಸ್ನೇಹಿತರಿಗೆ ಕೂಡ ಸಲ್ಮಾನ್ ಭೇಟಿಗೆ ಅವಕಾಶ ನೀಡಿದ್ದಾರೆ.

ಜೈಲಿನ ಡಿಐಜಿ ಹಾಗೂ ಜೈಲಾಧಿಕಾರಿಗಳು ಕೂಡ ಕುಟುಂಬದ ಸದಸ್ಯರನ್ನು ಸಲ್ಮಾನ್ ಗೆ ಭೇಟಿ ಮಾಡಿಸಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. ನಂತ್ರ ಸಿಬ್ಬಂದಿ ಸಾಲಾಗಿ ಬಂದು ಸೆಲ್ಫಿ ತೆಗೆಸಿಕೊಂಡಿದ್ದಾರೆ. ಎಲ್ಲರಿಗೂ ಸಲ್ಮಾನ್ ಸ್ಪಂದಿಸಿದ್ದಾರೆ. ಸಲ್ಮಾನ್ ಜೊತೆಗೊಂದೇ ಅಲ್ಲ ಅರ್ಪಿತಾ ಹಾಗೂ ಅಲ್ವಿರಾ ಜೊತೆಯೂ ಸಿಬ್ಬಂದಿ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಎರಡು ದಿನ ಸಲ್ಮಾನ್ ಜೈಲಿನಲ್ಲಿ ಕಳೆದಿದ್ದಾರೆ. ಮೊದಲ ದಿನ ಆತಂಕ, ಕಿರಿಕಿರಿ ಅನುಭವಿಸಿದ್ದ ಸಲ್ಮಾನ್ ಖಾನ್ ಎರಡನೇ ದಿನ ಸ್ವಲ್ಪ ರಿಲ್ಯಾಕ್ಸ್ ಆಗಿದ್ದರು. ಸಲ್ಮಾನ್ ಖಾನ್ ಆಪ್ತ ಸ್ನೇಹಿತೆ ಪ್ರೀತಿ ಜಿಂಟಾ ಜೊತೆ ಮಾತುಕತೆ ನಡೆಸಿ ಸ್ವಲ್ಪ ರಿಲ್ಯಾಕ್ಸ್ ಆಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...