alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಜಾಗಕ್ಕೆ ಯಾರಾದ್ರೂ ಬರ್ತಾರೆ ಎಂದ್ರು ಸಲ್ಮಾನ್ ತಂದೆ

ಅಲಿ ಅಬ್ಬಾಸ್ ಜಾಫರ್ ಮೆಗಾ ಚಿತ್ರ ‘ಭಾರತ್’ ತಂಡದಿಂದ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹೊರ ಬಿದ್ದಿದ್ದಾಳೆ. ಇದು ಈಗ ಚರ್ಚೆಯ ವಿಷ್ಯವಾಗಿದೆ. ಭಾರತ್ ಚಿತ್ರದ ಮೂಲಕ ಬಾಲಿವುಡ್ ಗೆ ವಾಪಸ್ ಆಗ್ತಾಳೆ, ಸಲ್ಮಾನ್ ಖಾನ್ ಜೊತೆ ಅನೇಕ ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಳ್ತಾಳೆಂದು ಜನರು ಆಸೆಯಿಟ್ಟುಕೊಂಡಿದ್ದರು. ಆದ್ರೆ ಅಭಿಮಾನಿಗಳ ಆಸೆ ಈಡೇರುತ್ತಿಲ್ಲ.

ಈ ವಿಚಾರದ ಬಗ್ಗೆ ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ಚಿತ್ರಗಳಲ್ಲಿ ಆಗಿದೆ. ದಿನಾಂಕದ ಕಾರಣ, ಪಾತ್ರದ ಕಾರಣ ಇಲ್ಲ ಸಂಬಳದ ಕಾರಣ ನಟ-ನಟಿಯರು ತಂಡ ಬಿಟ್ಟು ಹೋಗ್ತಾರೆ. ಪ್ರಿಯಾಂಕ, ಭಾರತ್ ಚಿತ್ರದಿಂದ ಹೊರ ಬಿದ್ದಿರುವುದು ನಮಗೆ ನಿರಾಸೆಯಾಗಿಲ್ಲ. ಅವ್ರ ಸ್ಥಾನಕ್ಕೆ ಇನ್ನೊಬ್ಬರು ಬರ್ತಾರೆ. ಆದ್ರೆ ಯಾರು ಬರ್ತಾರೆಂದು ಹೇಳಲು ಸಾಧ್ಯವಿಲ್ಲವೆಂದು ಸಲೀಂ ಹೇಳಿದ್ದಾರೆ.

ಪ್ರಿಯಾಂಕ ಈ ವರ್ತನೆಗೆ ಚಿತ್ರದ ನಿರ್ಮಾಪಕ ನಿಖಿಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಎಂಗೇಜ್ಮೆಂಟ್ ಕಾರಣ ಹೇಳಿ ಪ್ರಿಯಾಂಕ ಭಾರತ್ ಚಿತ್ರ ಬಿಟ್ಟಿದ್ದಾರೆ. ಇದು ವೃತ್ತಿಪರತೆಯಲ್ಲ ಎಂದು ನಿಖಿಲ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...