alex Certify
ಕನ್ನಡ ದುನಿಯಾ       Mobile App
       

Kannada Duniya

ಸಂದರ್ಶನದ ವೇಳೆ ಪ್ಯಾಂಟ್ ನಿಂದ ಹೊರಗಿತ್ತಂತೆ ಈ ನಿರ್ದೇಶಕನ ಖಾಸಗಿ ಅಂಗ

ಬಾಲಿವುಡ್ ನಲ್ಲಿ ಮೀಟೂ ಅಭಿಯಾನ ಚುರುಕು ಪಡೆಯುತ್ತಿದೆ. ನಟಿ ತನುಶ್ರೀ ದತ್ತಾ ನಂತ್ರ ಒಬ್ಬರಾದ್ಮೇಲೆ ಒಬ್ಬರು ನಟಿಯರು ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸುತ್ತಿದ್ದಾರೆ. ಬಾಲಿವುಡ್ ನ ಪ್ರಸಿದ್ಧ ನಿರ್ದೇಶಕ ಸಾಜಿದ್ ಖಾನ್ ಮೇಲೆ ಈಗ ಆರೋಪ ಕೇಳಿ ಬಂದಿದೆ.

ಹಮ್ಶಕಲ್ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ನಟಿ ಸಲೋನಿ ಚೋಪ್ರಾ, ಸಾಜಿದ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. 2011ರಲ್ಲಿ ಸಂದರ್ಶನಕ್ಕೆ ಹೋದಾಗ ಕೆಟ್ಟ ಪ್ರಶ್ನೆಗಳನ್ನು ಸಾಜಿದ್ ಕೇಳಿದ್ದನಂತೆ. ಹೊತ್ತಲ್ಲದ ಹೊತ್ತಿನಲ್ಲಿ ಫೋನ್ ಮಾಡುತ್ತಿದ್ದ ಸಾಜಿದ್, ಬಿಕಿನಿ ಫೋಟೋ ಬೇಕೆಂದು ಕೇಳುತ್ತಿದ್ದನಂತೆ. ಬಿಕಿನಿ ಫೋಟೋ ನೋಡಿ ನೀನು ನಟಿಯಾಗಲು ಯೋಗ್ಯಳೇ ಎಂದು ನಿರ್ಧರಿಸುತ್ತೇನೆಂದು ಹೇಳಿದ್ದನಂತೆ.

ಸಲೋನಿ ಚೋಪ್ರಾ ಒಬ್ಬಳೇ ಅಲ್ಲ ಇನ್ನಿಬ್ಬರು ನಟಿಯರು ಕೂಡ ಸಾಜಿದ್ ವಿರುದ್ಧ ಆರೋಪ ಮಾಡಿದ್ದಾರೆ. ಸಾಜಿದ್ ಸಂದರ್ಶನಕ್ಕಾಗಿ ಮನೆಗೆ ಕರೆದಿದ್ದ. ಮನೆಯಲ್ಲಿ ಅಶ್ಲೀಲ ಪ್ರಶ್ನೆಗಳನ್ನು ಕೇಳಿದ್ದ. ನಂತ್ರ ಆತನ ಖಾಸಗಿ ಅಂಗ ಪ್ಯಾಂಟ್ ನಿಂದ ಹೊರಗಿತ್ತು. ನಾನು ಅಲ್ಲಿಂದ ಹೊರಡಲು ನಿರ್ಧರಿಸಿದ್ದೆ. ನನ್ನನ್ನು ಗಟ್ಟಿಯಾಗಿ ಹಿಡಿದು ಕಿಸ್ ಕೊಟ್ಟಿದ್ದ ಎಂದು ನಟಿಯೊಬ್ಬಳು ಟ್ವಿಟ್ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...