alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಫ್-ಕರೀನಾ ಗಲಾಟೆಗೆ ಕಾರಣವಾಯ್ತು ಮಲಮಗಳ ವೃತ್ತಿ

saif-ali-khan-kareena-kapoor-khan-sara-ali-khan_1487309382

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿಖಾನ್ ಬಾಲಿವುಡ್ ಗೆ ಎಂಟ್ರಿಯಾಗ್ತಾಳೆ ಎನ್ನುವ ಬಗ್ಗೆ ಅನೇಕ ದಿನಗಳಿಂದ ಸುದ್ದಿ ಕೇಳಿಬರ್ತಾ ಇದೆ. ಆದ್ರೆ ಸಾರಾ ಈವರೆಗೂ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಕರಣ್ ಜೋಹರ್ ಬ್ಯಾನರ್ ನಲ್ಲಿ ಸಾರಾ ವೃತ್ತಿಜೀವನ ಶುರುಮಾಡ್ತಾಳೆ ಎನ್ನಲಾಗ್ತಾ ಇದೆ. ಆದ್ರೆ ಇದೇ ವಿಷಯ ಸೈಫ್ ಹಾಗೂ ಕರೀನಾ ನಡುವಿನ ಗಲಾಟೆಗೆ ಕಾರಣವಾಗಿದೆ.

ಸಾರಾ ಯಾರ ಜೊತೆ ಚೊಚ್ಚಲ ಚಿತ್ರಮಾಡಬೇಕೆನ್ನುವ ಬಗ್ಗೆ ಸೈಫ್ ಹಾಗೂ ಕರೀನಾ ನಡುವೆ ವಿವಾದವೆದ್ದಿದೆ. ಕರೀನಾ  ಕರಣ್ ಜೋಹರ್ ಬ್ಯಾನರ್ ಅಡಿ ಸಾರಾ ವೃತ್ತಿ ಶುರುಮಾಡಲಿ ಎನ್ನುತ್ತಿದ್ದಾಳೆ. ಆಲಿಯಾ ಭಟ್ ಕೂಡ ಕರಣ್ ಬ್ಯಾನರ್ ನಲ್ಲಿ ವೃತ್ತಿ ಶುರುಮಾಡಿದ್ದು, ಆಕೆ ಈಗ ಯಶಸ್ವಿ ನಾಯಕಿಯಾಗಿದ್ದಾಳೆ. ಕರಣ್ ಗೆ ಸಾಕಷ್ಟು ನಿರ್ದೇಶಕರ ಜೊತೆ ಸ್ನೇಹವಿದ್ದು, ಮುಂದಿನ ಚಿತ್ರಗಳಿಗೆ ನೆರವಾಗ್ತಾರೆ ಎನ್ನುವುದು ಕರೀನಾ ಅಭಿಪ್ರಾಯ.

ಸೈಫ್ ಮಾತ್ರ ಇದಕ್ಕೆ ಒಲ್ಲೆ ಎನ್ನುತ್ತಿದ್ದಾನೆ. ಕರಣ್ ಬ್ಯಾನರ್ ಚಿತ್ರದಲ್ಲಿ ವೃತ್ತಿ ಶುರುಮಾಡಿದ್ರೆ ಸ್ವಾತಂತ್ರ್ಯವಿರುವುದಿಲ್ಲ. ಕರಣ್ ಎಲ್ಲದಕ್ಕೂ ಮಧ್ಯ ಪ್ರವೇಶ ಮಾಡ್ತಾರೆ ಎಂಬುದು ಸೈಫ್ ಅಭಿಪ್ರಾಯ. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಗಿದ್ದು, ಸಾರಾ ಯಾವ ಚಿತ್ರದಲ್ಲಿ ನಟಿಸ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...