alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಫ್ ಪುತ್ರಿಯ ಬಾಲಿವುಡ್ ಎಂಟ್ರಿಗೆ ದಿನಗಣನೆ

sara-ali-khan-346ಬಾಲಿವುಡ್ ನಟ ಸೈಫ್ ಆಲಿಖಾನ್ ರ ಪುತ್ರಿ ಸಾರಾ ಆಲಿಖಾನ್, ಬಾಲಿವುಡ್ ಎಂಟ್ರಿಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರರಂಗ ಪ್ರವೇಶಕ್ಕೂ ಮುನ್ನ ಪದವಿ ಪೂರೈಸಲು ತಂದೆ ನೀಡಿದ್ದ ಸಲಹೆಯಂತೆ ಸಾರಾ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಈಗ ಪದವಿ ಪಡೆದಿದ್ದಾರೆ.

ಸೈಫ್ ಆಲಿಖಾನ್ ಹಾಗೂ ಅವರ ಪ್ರಥಮ ಪತ್ನಿ ಅಮೃತಾ ಸಿಂಗ್ ದಂಪತಿಗಳ ಪುತ್ರಿಯಾಗಿರುವ ಸಾರಾ ಆಲಿಖಾನ್, ಪದವಿ ಪಡೆದಿರುವ ವಿಚಾರವನ್ನು ಅಮೃತಾ ಸಿಂಗ್ ಅವರ ಗೆಳೆಯ ಸಂದೀಪ್ ಕೋಸ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮುಂದಿನ ಬಾಲಿವುಡ್ ನಟಿ ಎಂಬ ಹ್ಯಾಶ್ ಟ್ಯಾಗ್ ನೀಡುವ ಮೂಲಕ ಸಾರಾಳ ಬಾಲಿವುಡ್ ಎಂಟ್ರಿಯ ಕುರಿತು ಸುಳಿವು ನೀಡಿದ್ದಾರೆ.

ಸಾರಾ ಆಲಿಖಾನ್ ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಹಿರಿಯ ರಾಜಕಾರಣಿಯೂ ಆಗಿರುವ ಸುಶೀಲ್ ಕುಮಾರ್ ಶಿಂಧೆಯವರ ಮೊಮ್ಮಗ ವೀರ್ ಜೊತೆ ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂಬ ಮಾತುಗಳೂ ಕೇಳಿ ಬಂದಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...