alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾ ಕಂಡಿದ್ದೇ ತಡ ಮುಖ ಮುಚ್ಚಿಕೊಂಡ್ಲು ಈ ಬೆಡಗಿ

ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾಳೆ. ಕೇದಾರನಾಥ್ ಚಿತ್ರದಲ್ಲಿ ನಟಿಸ್ತಿದ್ದಾಳೆ. ಇತ್ತೀಚೆಗಷ್ಟೆ ಜಿಮ್ ಮುಗಿಸಿಕೊಂಡು ಬರುತ್ತಿದ್ದ ಸಾರಾ ಛಾಯಾಗ್ರಾಹಕರ ಕಣ್ಣಿಗೆ ಬಿದ್ಲು.

ಜಿಮ್ ವೇರ್ ನಲ್ಲಿ ಸಖತ್ ಸ್ಟೈಲಿಶ್ ಆಗಿಯೇ ಕಾಣ್ತಿದ್ಲು. ಆದ್ರೆ ಪಾಪರಾಜಿಗಳನ್ನು ಕಂಡಿದ್ದೇ ತಡ ಮುಖ ಮುಚ್ಚಿಕೊಂಡಿದ್ದಾಳೆ ಈ ಯುವ ನಟಿ. ಸಾರಾಳ ಈ ವರ್ತನೆ ನೋಡಿ ಎಲ್ಲರೂ ದಂಗಾಗಿದ್ದಾರೆ.

ಬೇಬಿ ಪಿಂಕ್ ಬಣ್ಣದ ಟಿ ಶರ್ಟ್, ಬಿಳಿ ಶಾರ್ಟ್ಸ್, ಸ್ಲಿಪರ್ ತೊಟ್ಟಿದ್ದ ಸಾರಾ ಕ್ಯಾಮರಾ ಕಂಡೊಡನೆ ಮುಖ ಮುಚ್ಚಿಕೊಂಡಿದ್ಯಾಕೆ ಅನ್ನೋದು ಎಲ್ಲರ ಪ್ರಶ್ನೆ. ಸ್ಟಾರ್ ಕಿಡ್ ಅನ್ನೋ ಅಹಂಕಾರ ಇರಬಹುದು ಎನ್ನುತ್ತಾರೆ ಕೆಲವರು.

ಆದ್ರೆ ಮೇಕಪ್ ಇಲ್ಲದೇ ಇದ್ದಿದ್ರಿಂದ ಸಾರಾ ಮುಖ ಮುಚ್ಚಿಕೊಂಡಿದ್ದಾಳೆ ಅಂತಾನೂ ಹೇಳಲಾಗ್ತಿದೆ. ಸಾಮಾನ್ಯವಾಗಿ ನಟಿಯರು ಮೇಕಪ್ ಇಲ್ಲದೇ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...