alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಂತ್ರಾ ಜೊತೆ ಸೈಫ್ ಒಪ್ಪಂದ: ಆನ್ಲೈನ್ ನಲ್ಲಿ ಸಿಗ್ತಿದೆ ಹೌಸ್ ಆಫ್ ಪಟೌಡಿ ಬಟ್ಟೆ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಆನ್ಲೈನ್ ಶಾಪಿಂಗ್ ಸೈಟ್ ಮಿಂತ್ರಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಸೈಫ್ ಅಲಿ ಖಾನ್, ಫ್ಯಾಶನ್ ಬ್ರ್ಯಾಂಡ್ ಹೌಸ್ ಆಫ್ ಪಟೌಡಿ ಶುರು ಮಾಡಿದ್ದಾರೆ. ಹೌಸ್ ಆಫ್ ಪಟೌಡಿ ಮೂಲಕ ಹಳೆ ಸಂಪ್ರದಾಯವನ್ನು ಮತ್ತೆ ಚಾಲ್ತಿಗೆ ತರುವುದು ನನ್ನ ಉದ್ದೇಶವೆಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸೈಫ್ ಅಲಿ ಖಾನ್, ತನಗೆ ಬಟ್ಟೆಗಳ ಮೇಲೆ ತುಂಬಾ ಪ್ರೀತಿಯಿದೆ. ಸಂಪ್ರದಾಯ ಉಡುಗೆಗಳ ಬಗ್ಗೆ ಹೆಚ್ಚು ತಿಳಿದಿದ್ದೇನೆಂದು ಹೇಳಿದ್ದಾರೆ. ಅಂಗಡಿಗಳಲ್ಲಿ ಸಾಂಪ್ರದಾಯಿಕ ಉಡುಗೆಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗ್ತಿಲ್ಲ. ಹಾಗಾಗಿ ಜನರು ಆನ್ಲೈನ್ ಮೊರೆ ಹೋಗ್ತಿದ್ದಾರೆ. ಇದಕ್ಕಾಗಿಯೇ ನಾವು ಹೌಸ್ ಆಫ್ ಪಟೌಡಿ ಲಾಂಚ್ ಮಾಡಿದ್ದೇವೆಂದು ಸೈಫ್ ಹೇಳಿದ್ದಾರೆ.

ಪತ್ನಿ ಕರೀನಾ ಕಪೂರ್ ಖಾನ್ ಬಗ್ಗೆಯೂ ಹೊಗಳಿದ ಸೈಫ್, ಕರೀನಾ ಫ್ಯಾಷನ್ ಐಕಾನ್ ಎಂದ್ರು. ಕರೀನಾಗೆ ಬಟ್ಟೆ ಬಗ್ಗೆ ತುಂಬಾ ಪ್ರೀತಿಯಿದೆ. ಸಿಕ್ಕಾಗೆಲ್ಲ ಹೊಸ ಹೊಸ ಬಟ್ಟೆ ಖರೀದಿ ಮಾಡ್ತಾರೆ ಎಂದ ಸೈಫ್ ಎಂದೂ ಕರೀನಾ ನನಗೆ ಬಟ್ಟೆ ಖರೀದಿ ಮಾಡಲ್ಲ ಎಂದರು. ಹೆಣ್ಣು ಮಕ್ಕಳ ಬಟ್ಟೆ ಬಗ್ಗೆ ಹೆಚ್ಚು ಜ್ಞಾನವಿದೆ ಎಂದ ಮಾತ್ರಕ್ಕೆ ಪುರುಷರ ಬಗ್ಗೆ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದೀರಿ ಎಂದಲ್ಲ. ಎರಡರ ಮಧ್ಯೆ ವ್ಯತ್ಯಾಸವಿದೆ. ಸದಾ ನನ್ನ ಬಟ್ಟೆಯನ್ನು ನಾನೇ ಖರೀದಿ ಮಾಡುತ್ತೇನೆಂದು ಸೈಫ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...