alex Certify
ಕನ್ನಡ ದುನಿಯಾ       Mobile App
       

Kannada Duniya

ಮೇ 18 ರಂದು ರಾಜ್ಯಾದ್ಯಂತ ‘ಸದ್ದು’ ಬಿಡುಗಡೆ

ಮೇ 18ರಂದು ರಾಜ್ಯಾದ್ಯಂತ`ಸದ್ದು’ ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಚಿತ್ರ ತಂಡ ಮನವಿ ಮಾಡಿತು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ಛಾಯಾಗ್ರಾಹಕ ಎನ್. ವೀರೇಶ್, ಈ ಚಿತ್ರದಲ್ಲಿ ಎಲ್ಲರೂ ಹೊಸಬರಾಗಿದ್ದು, ಅರುಣ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನವಿದೆ. ದಾಂಡೇಲಿ ಹಾಗೂ ಮಂಗಳೂರು ಸುತ್ತಮುತ್ತಲಿನಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು.

ನಟಿ ನಿಖಿತಾ ಸ್ವಾಮಿ ಮಾತನಾಡಿ, ನಾನು ಶಿಕಾರಿಪುರದವಳಾಗಿದ್ದು, ಇದು ತಮ್ಮ ಪ್ರಥಮ ಚಿತ್ರವಾಗಿದೆ. ಚಿತ್ರದಲ್ಲಿ ಕಾಡು ಪ್ರಾಣಿಗಳನ್ನು ಸಂರಕ್ಷಿಸಿ, ಪ್ರಕೃತಿ ಉಳಿಸಿ ಎಂಬ ಸಂದೇಶವಿದೆ. ನಿರ್ದೇಶಕರು ನೈಜ ಘಟನೆಯೊಂದನ್ನು ಆಧರಿಸಿ ಚಿತ್ರ ಮಾಡಿದ್ದಾರೆ. ಮನುಷ್ಯ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ಕಾಡು ಪ್ರಾಣಿಗಳಿಗೆ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ ಎಂದರು.

ನಗರದಲ್ಲಿರುವ ಸದ್ದು ಕಾಡಿನಲ್ಲಿರುವುದಿಲ್ಲ ಎಂಬ ಅಂಶವು ಪ್ರಮುಖ ಪಾತ್ರ ವಹಿಸಲಿದೆ. ಚಿತ್ರದಲ್ಲಿ ಹಾರರ್ ಗೆ ಹೆಚ್ಚು ಅವಕಾಶ ಕೊಡದೆ ಆ್ಯಕ್ಷನ್, ಥ್ರಿಲ್ಲರ್ ಹಾಗೂ ಲವ್ ಸ್ಟೋರಿ ಇದೆ. ಕಾಡಿನಲ್ಲಿ ಫೋಟೋ ತೆಗೆಯುವ ವೇಳೆ ಏನೆಲ್ಲಾ ತೊಂದರೆ, ತೊಡಕುಗಳು ಎದುರಾಗುತ್ತವೆ. ಕಾಡಿನೊಳಗೆ ಬಂದು ಮೋಜು-ಮಸ್ತಿ ಮಾಡುವುದರಿಂದ ಅಲ್ಲಿನ ಪ್ರಾಣಿ ಪಕ್ಷಿಗಳು ಎಷ್ಟು ತೊಂದರೆ ಅನುಭವಿಸುತ್ತವೆ ಎಂಬುದರ ಬಗ್ಗೆಯೂ ಚಿತ್ರಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಇನ್ನೋರ್ವ ನಟಿ ಕುಂಸಿಯ ಭಾಗ್ಯ ಮೋಹನ್, ಖಳನಟ ಭೋಜರಾಜ್ ವಾವಂಬೂರ್, ಸಹ ನಿರ್ದೇಶಕ ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...