alex Certify
ಕನ್ನಡ ದುನಿಯಾ       Mobile App
       

Kannada Duniya

ನೀನು ಮಂಗಳಮುಖಿಯಾ ಎಂಬ ಪ್ರಶ್ನೆಗೆ ನಟಿ ನೀಡಿದ್ಲು ಈ ಉತ್ತರ

ಸೈಫ್ ಅಲಿ ಖಾನ್ ಹಾಗೂ ನವಾಝುದ್ದೀನ್ ಸಿದ್ದಿಕಿ ಅಭಿನಯದ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಚಿತ್ರದಲ್ಲಿ ಟ್ರಾನ್ಸ್ಜೆಂಡರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುಬ್ರಾ ಚರ್ಚೆಗೆ ಕಾರಣವಾಗಿದ್ದಳು. ಕುಬ್ರಾ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ವಿಷ್ಯವನ್ನು ಹೇಳಿದ್ದಾಳೆ.

ಬಹುತೇಕರು ಕುಬ್ರಾ ಮಂಗಳಮುಖಿ ಎಂದೇ ನಂಬಿದ್ದಾರಂತೆ. ನೀನು ಟ್ರಾನ್ಸ್ಜೆಂಡರಾ ಎಂದು ಪ್ರಶ್ನೆ ಕೂಡ ಮಾಡಿದ್ದಾರಂತೆ. ಮಿಡ್ ಡೇ ಜೊತೆ ಮಾತನಾಡಿದ ಕುಬ್ರಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ. ಜನರು ಹೀಗೆ ಪ್ರಶ್ನೆ ಕೇಳಿದ್ರೆ ನನಗೆ ಖುಷಿಯಾಗುತ್ತದೆ. ಪಾತ್ರವನ್ನು ಜನ ಸತ್ಯವೆಂದು ನಂಬುವಷ್ಟು ಅತ್ಯುತ್ತಮವಾಗಿ ನಟಿಸಿದ್ದೇನೆಂದು ಹೆಮ್ಮೆಯಾಗುತ್ತದೆ. ಶಾಲೆಯಲ್ಲಿ ಪಾತ್ರವನ್ನು ಹೇಗೆ ನಿಭಾಯಿಸುತ್ತಿದ್ದೇನೋ ಅದೇ ರೀತಿ ಟ್ರಾನ್ಸ್ಜಂಡರ್ ಪಾತ್ರ ನಿಭಾಯಿಸಿದ್ದೇನೆ ಎಂದು ಕುಬ್ರಾ ಹೇಳಿದ್ದಾಳೆ.

ಹಿಂದೆ ಸಂದರ್ಶನವೊಂದರಲ್ಲಿ ಕುಬ್ರಾ ನಗ್ನ ದೃಶ್ಯದ ಬಗ್ಗೆ ಹೇಳಿದ್ದಳು. ಅನುರಾಗ್ ಕಶ್ಯಪ್ ಮೊದಲೇ ಈ ಬಗ್ಗೆ ಹೇಳಿದ್ದರು. ಆಡಿಷನ್ ನಲ್ಲಿಯೇ ನಾನು ಇದಕ್ಕೆ ಒಪ್ಪಿಕೊಂಡಿದ್ದೆ. ಸುಮಾರು 7 ಬಾರಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು ಎಂದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...