alex Certify
ಕನ್ನಡ ದುನಿಯಾ       Mobile App
       

Kannada Duniya

ಸೈನಿಕರಿಗಾಗಿ ಸಚಿನ್ ಚಿತ್ರದ ವಿಶೇಷ ಸ್ಕ್ರೀನಿಂಗ್

sachin_owtjmil

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸದ್ಯ ತಮ್ಮ ಸಚಿನ್ ದಿ ಬಿಲಿಯನ್ ಡ್ರೀಮ್ಸ್ ಚಿತ್ರದಲ್ಲಿ ಬ್ಯೂಸಿಯಿದ್ದಾರೆ. ಈ ಚಿತ್ರವನ್ನು ಮೊದಲು ನೋಡುವ ಅವಕಾಶ ಸೈನಿಕರು ಹಾಗೂ ಅವರ ಕುಟುಂಬಸ್ಥರಿಗೆ ದೊರಕಿದೆ. ಭಾನುವಾರ ವಾಯು ಸೇವೆ, ನೌಕಾಪಡೆ ಮತ್ತು ಸೈನಿಕರು ಹಾಗೂ ಅವರ ಕುಟುಂಬಸ್ಥರು ಚಿತ್ರ ವೀಕ್ಷಿಸಿದ್ರು. ಸೈನಿಕರಿಗಾಗಿ ಸಚಿನ್ ವಿಶೇಷ ಸ್ಕ್ರೀನಿಂಗ್ ಏರ್ಪಡಿಸಿದ್ದರು.

ದೆಹಲಿಯಲ್ಲಿರುವ ಭಾರತೀಯ ವಾಯುಪಡೆ ಆಡಿಟೋರಿಯಂನಲ್ಲಿ ತಮ್ಮ ಚಿತ್ರ ಸಚಿನ್ ದಿ ಬಿಲಿಯನ್ ಡ್ರೀಮ್ಸ್ ಚಿತ್ರದ ವಿಶೇಷ ಸ್ಕ್ರೀನಿಂಗ್ ಮಾಡಿದ್ರು. ಈ ವೇಳೆ ಸಚಿನ್ ಜತೆ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಧವೋವಾ, ಇದೊಂದು ಅತ್ಯುತ್ತಮ ಚಿತ್ರ. ಸಚಿನ್ ಕ್ರಿಕೆಟ್ ಕೆರಿಯರ್ ಆರಂಭಿಸುವ ಮೊದಲೇ ನಾನು ವಾಯುಸೇನೆಯಲ್ಲಿದ್ದೆ. ಹಾಗಾಗಿ ಅವರ ವೃತ್ತಿ ಜೀವದನ ಬಗ್ಗೆ ನನಗೆ ಗೊತ್ತು. ಅವರ ಜೀವನ ಸ್ಪೂರ್ತಿದಾಯಕವಾಗಿದೆ ಎಂದಿದ್ದಾರೆ.

ಸಚಿನ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸೈನಿಕರು ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಸೈನಿಕರ ಮೆಚ್ಚುಗೆಗೆ ಸಚಿನ್ ಧನ್ಯವಾದ ಸಲ್ಲಿಸಿದ್ದಾರೆ. ಸಚಿನ್ ದಿ ಬಿಲಿಯನ್ ಡ್ರೀಮ್ಸ್ ಚಿತ್ರ ಇದೇ ಮೇ.26 ರಂದು ತೆರೆಗೆ ಬರಲಿದೆ.  ಎರಡು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಮಾಡಿದ್ದ ಸಚಿನ್ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...