alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಪ್ರಭಾಸ್ ಬಗ್ಗೆ ಹೀಗೆಂದಿದ್ದಾರೆ ಆ ನಟಿ…!

‘ಬಾಹುಬಲಿ’ ಪ್ರಭಾಸ್ ಈಗ ‘ಸಾಹೋ’ ಆಗಿ ಕಾಣಿಸಿಕೊಳ್ತಿರೊ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಸದ್ಯ ಅಬುದಾಭಿಯಲ್ಲಿ ‘ಸಾಹೋ’ ಚಿತ್ರದ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಬರ್ತಿರೋ ಸಿನಿಮಾ ಬಿಗ್ ಸ್ಟಾರ್ ಕಾಸ್ಟ್ ಹೊಂದಿದೆ.

ಅಬುದಾಭಿಯಲ್ಲಿ ನಡೀತಿರೋ ಚಿತ್ರೀಕರಣದಲ್ಲಿ ನಟ ಪ್ರಭಾಸ್ ಮತ್ತು ಬಾಲಿವುಡ್ ನಟಿ ಎವೆಲಿನ್ ಶರ್ಮಾ ಪಾಲ್ಗೊಂಡಿದ್ದಾರೆ. ಪ್ರಭಾಸ್ ವ್ಯಕ್ತಿತ್ವಕ್ಕೆ ಬಾಲಿವುಡ್ ನಟಿ ಎವೆಲಿನ್ ಫಿದಾ ಆಗಿಬಿಟ್ಟಿದ್ದಾಳೆ. ಅದಕ್ಕೆ ನೋಡಿ ಡಾರ್ಲಿಂಗ್ ಪ್ರಭಾಸ್ ನ್ನ ಸಿಕ್ಕಾಪಟ್ಟೆ ಹೊಗಳ್ತಿದ್ದಾರೆ.

ಪ್ರಭಾಸ್ ಸೂಪರ್ ಸ್ಟಾರ್ ಆಗಿದ್ದರು. ಎಲ್ಲರು ಹೇಳ್ತಾರೆ ಅವರಿಗೆ ಸ್ವಲ್ಪ ಸಂಕೋಚದ ಸ್ವಭಾವದ ವ್ಯಕ್ತಿ ಅಂತ. ಆದ್ರೆ ನಾನು ಪ್ರಭಾಸ್ ರನ್ನ ತಿಳಿದುಕೊಳ್ತಾ ಹೋದ ಹಾಗೆ ನನಗನ್ನಿಸಿದ್ದು ಅವರು ಸಂಕೋಚದ ವ್ಯಕ್ತಿ ಅಲ್ಲ. ಸದಾ ಸೆಟ್ ನಲ್ಲಿ ಖುಷಿ ಇರೋ ಹಾಗೆ ಅವರು ನೋಡಿಕೊಳ್ತಾರೆ. ಪ್ರಭಾಸ್ ಜೊತೆಗೆ ಮತ್ತು ಚಿತ್ರತಂಡದ ಜೊತೆಗೆ ಕೆಲಸ ಮಾಡೋಕೆ ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ ಎಂದಿದ್ದಾರೆ ಎವೆಲಿನ್ ಶರ್ಮಾ.

150 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗ್ತಿರೋ ಸಿನಿಮಾದಲ್ಲಿ ಬಾಲಿವುಡ್ ನ ಅನೇಕ ನಟ-ನಟಿಯರು ಚಿತ್ರದಲ್ಲಿದ್ದಾರೆ. ‘ಸಾಹೋ’ ಚಿತ್ರದ ಫಸ್ಟ್ ಲುಕ್ ತುಂಬಾ ಹಿಂದೆಯೇ ರಿಲೀಸ್ ಆಗಿದ್ದು, ಚಿತ್ರದ ಟ್ರೇಲರ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...