alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಬರ್ತಡೇ ಆಚರಣೆ ಹೇಗಿತ್ತು ಗೊತ್ತಾ?

ನಟ ಪ್ರಭಾಸ್ ಒಂದು ರೀತಿಯ ನಾಚಿಕೆ ಸ್ವಭಾವದವರು. ಮಾಧ್ಯಮಗಳಿಂದ ದೂರವೇ ಇರ್ತಾರೆ. ಬಾಹುಬಲಿ ಯಶಸ್ಸಿನ ನಂತರವೂ ಅವರ ಈ ಗುಣ ಮಾತ್ರ ಬದಲಾಗಿಲ್ಲ. ಮೊನ್ನೆಯಷ್ಟೇ ಪ್ರಭಾಸ್ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಬಹುಬೇಡಿಕೆಯ ನಟ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿರ್ತಾರೆ ಅನ್ನೋದು ಎಲ್ಲರ ನಂಬಿಕೆ. ಆದ್ರೆ ಪ್ರಭಾಸ್ ಬರ್ತಡೇ ಸೆಲೆಬ್ರೇಶನ್ ಮಾತ್ರ ತುಂಬಾನೇ ಸಿಂಪಲ್ ಆಗಿತ್ತು.

ಕುಟುಂಬದವರು, ಸ್ನೇಹಿತರ ಜೊತೆ ಸರಳವಾಗಿ ಪ್ರಭಾಸ್ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಚಿತ್ರರಂಗದ ಹಲವರು ಗ್ರಾಂಡ್ ಪಾರ್ಟಿ ಆಯೋಜಿಸೋದಾಗಿ ಹೇಳಿದ್ರು. ಆದ್ರೆ ಖುದ್ದು ಪ್ರಭಾಸ್ ಅದನ್ನೆಲ್ಲ ನಿರಾಕರಿಸಿದ್ರು. ಟಾಲಿವುಡ್ ನಟನ ಸರಳತೆಗೆ ಇದೇ ಸಾಕ್ಷಿ.

ಸದ್ಯ ಪ್ರಭಾಸ್ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಬರ್ತಡೇ ದಿನವೇ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಸಿನೆಮಾದಲ್ಲಿ ಶ್ರದ್ಧಾ ಕಪೂರ್, ಪ್ರಭಾಸ್ ಗೆ ನಾಯಕಿಯಾಗಿ ನಟಿಸುತ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...