alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಗಣೇಶ್ ವಿರುದ್ಧ ಎಸ್. ನಾರಾಯಣ್ ಮಾನನಷ್ಟ ಮೊಕದ್ದಮೆ

s-naray

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ವಿರುದ್ಧ ನಿರ್ದೇಶಕ ಎಸ್. ನಾರಾಯಣ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಅಗರಬತ್ತಿ ಕಂಪನಿಯೊಂದರ ವಿರುದ್ಧ ಗಣೇಶ್ ಕೇಸ್ ದಾಖಲಿಸಿದ್ದು, ಈ ಪ್ರಕರಣದಲ್ಲಿ ನಾರಾಯಣ್ ಅವರಿಗೆ ನಿರಂತರವಾಗಿ ಸಮನ್ಸ್ ಬಂದಿದ್ದರಿಂದ ಅವರು ಮಾನಹಾನಿ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.

‘ಚೆಲುವಿನ ಚಿತ್ತಾರ’ ಸಿನಿಮಾದ ಚಿತ್ರಗಳನ್ನು ಒಪ್ಪಂದ ಮಾಡಿಕೊಂಡು ಅಗರಬತ್ತಿ ಜಾಹೀರಾತಿಗೆ ಬಳಸಲಾಗಿತ್ತು. ಅವಧಿ ಮುಗಿದರೂ, ತಮ್ಮ ಭಾವಚಿತ್ರ ಬಳಸಿದ್ದಕ್ಕೆ ಗಣೇಶ್ ಕಂಪನಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಕಂಪನಿಯವರು ಹಾಗೂ ನಾರಾಯಣ್ ಅವರಿಗೆ ಇದೇ ವಿಚಾರಕ್ಕೆ ಸಮನ್ಸ್ ಜಾರಿಯಾಗಿದೆ. ಇದರಿಂದ ಬೇಸತ್ತ ನಾರಾಯಣ್, ಗಣೇಶ್ ಕೇಸ್ ಹಾಕಿದ್ದರಿಂದಲೇ ತಮಗೆ ಸಮನ್ಸ್ ಬಂದಿದೆ ಎಂದು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...