alex Certify
ಕನ್ನಡ ದುನಿಯಾ       Mobile App
       

Kannada Duniya

10 ಕೋಟಿ ಪರಿಹಾರಕ್ಕೆ ಪಾಕ್ ಗಾಯಕನ ಡಿಮ್ಯಾಂಡ್

ಪಾಕಿಸ್ತಾನದ ಗಾಯಕ ಅಲಿ ಝಫರ್, ಸಂಗೀತಗಾರ್ತಿ ಮೀಶಾ ಶಫಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ. ಅಲಿ ಜಫರ್ ತನಗೆ ಲೈಂಗಿಕ ಕಿರುಕುಳ ಕೊಡ್ತಿದ್ದಾರೆ ಅಂತಾ ಮೀಶಾ ಆರೋಪ ಮಾಡಿದ್ದರು. ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಅಲಿ, ನೋಟಿಸ್ ಕಳಿಸಿದ್ದಾರೆ.

ಮೀಶಾ ತಮ್ಮ ವಿರುದ್ಧ ಮಾಡಿರೋ ಆರೋಪ ಸುಳ್ಳು ಅಂತಾ ಅಲಿ ಜಫರ್ ಸ್ಪಷ್ಟಪಡಿಸಿದ್ದರು. ಆದ್ರೆ ಮೀಶಾ ಮಾತ್ರ ತಾನು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿರಲಿಲ್ಲ. ಕ್ಷಮೆ ಕೇಳಲು ಏಪ್ರಿಲ್ 23ರಿಂದ ಮೀಶಾಗೆ 2 ವಾರ ಕಾಲಾವಕಾಶ ನೀಡಿರೋ ಅಲಿ ಜಫರ್, ಇಲ್ಲವಾದಲ್ಲಿ 100 ಮಿಲಿಯನ್ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.

ಭಾಗ್ ಮಿಲ್ಕಾ ಭಾಗ್, ವಾರ್, ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ಮೀಶಾ ನಟಿಸಿದ್ದಾಳೆ. ಹಲವು ಹಾಡುಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...