alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ನಿರ್ದೇಶಕನ ಹೊಸ ಚಿತ್ರದ ನಾಯಕರ್ಯಾರು ಗೊತ್ತಾ?

ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ‘ಬಾಹುಬಲಿ’ ಚಿತ್ರದ ನಿರ್ದೇಶಕ ಎಸ್. ಎಸ್. ರಾಜಮೌಳಿಯವರ ಮುಂದಿನ ಚಿತ್ರ ಯಾವುದೆಂಬ ನಿರೀಕ್ಷೆಯಲ್ಲಿದ್ದ ಸಿನಿ ಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ರಾಜಮೌಳಿಯವರ ಮುಂದಿನ ಚಿತ್ರದ ಮೋಷನ್ ಪೋಸ್ಟರ್ ಗುರುವಾರದಂದು ಬಿಡುಗಡೆಯಾಗಿದೆಯಲ್ಲದೇ ಈ ಚಿತ್ರದಲ್ಲಿ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್ ಟಿ ಆರ್ ಅಭಿನಯಿಸುತ್ತಿರುವುದು ಖಚಿತಪಟ್ಟಿದೆ.

ಚಿತ್ರಕ್ಕೆ #RRR ಎಂಬ ಹೆಸರನ್ನಿಡಲಾಗಿದ್ದರೂ ಇದು ಅಂತಿಮವಲ್ಲವೆನ್ನಲಾಗಿದೆ. ರಾಜಮೌಳಿಯವರ ಹೊಸ ಚಿತ್ರ ಕುತೂಹಲ ಹುಟ್ಟಿಸಿದ್ದು, ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಹಿಂದೆಯೇ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್ ಟಿ ಆರ್ ಜೊತೆ ರಾಜಮೌಳಿಯವರು ಕೆಲಸ ಮಾಡಿದ್ದು, ರಾಮ್ ಚರಣ್ ತೇಜಾರ ‘ಮಗಧೀರ’ ಹಾಗೂ ಜ್ಯೂನಿಯರ್ ಎನ್ ಟಿ ಆರ್ ರ ‘ಸ್ಟೂಡೆಂಟ್ ನಂಬರ್ 1’ ಚಿತ್ರವನ್ನು ನಿರ್ದೇಶಿಸಿದ್ದರು. ರಾಜಮೌಳಿಯವರ ಹೊಸ ಚಿತ್ರ #RRR ಕುರಿತು ಹೆಚ್ಚಿನ ಮಾಹಿತಿ ಹೊರ ಬಿದ್ದಿಲ್ಲವಾದರೂ ಮೂವರ ಕಾಂಬಿನೇಷನ್ ನಲ್ಲಿ ಚಿತ್ರ ಅದ್ಬುತವಾಗಿ ಮೂಡಿ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...