alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕದಲ್ಲಿ ಚಿತ್ರರಂಗ ಮತ್ತು ರಾಜಕಾರಣ, ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಮತ್ತು ಕನ್ನಡ ಚಿತ್ರರಂಗದ ಒಡನಾಟ ಕುರಿತ ಮಾಹಿತಿ ಇಲ್ಲಿದೆ.

ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರಗಳು ಬೇರೆಯಾದರೂ, ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ. ರಾಜಕೀಯದಲ್ಲಿದ್ದವರು ಚಿತ್ರರಂಗದಲ್ಲಿ, ಚಿತ್ರರಂಗದಲ್ಲಿದ್ದವರು ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ರಾಜಕಾರಣದಲ್ಲಿರುವ ಅನೇಕರು ಚಿತ್ರ ನಿರ್ಮಾಣ, ನಟನೆಯಲ್ಲಿ ತೊಡಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿರುವವರು ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಚಿತ್ರರಂಗದಲ್ಲಿದ್ದವರು ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕದಲ್ಲಿಯೂ ವರನಟ ಡಾ. ರಾಜ್ ಕುಮಾರ್ ಅವರಿಗೆ ಅಂತಹ ಅವಕಾಶ ಇತ್ತಾದರೂ, ಅವರು ರಾಜಕೀಯದಿಂದ ದೂರವೇ ಉಳಿದಿದ್ದರು. ಚಿತ್ರ ನಿರ್ಮಾಪಕರಾಗಿರುವ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.

ಹಲವು ಕಲಾವಿದರು ಚಿತ್ರರಂಗದ ಜೊತೆಗೆ ರಾಜಕೀಯದಲ್ಲಿಯೂ ಗಮನ ಸೆಳೆದಿದ್ದಾರೆ. ಸಚಿವರಾಗಿರುವ ಉಮಾಶ್ರೀ, ಮಾಜಿ ಸಚಿವರಾದ ಅಂಬರೀಶ್, ಕುಮಾರ್ ಬಂಗಾರಪ್ಪ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜಗ್ಗೇಶ್, ಸಾಯಿಕುಮಾರ್, ಶಶಿಕುಮಾರ್, ನಿರ್ಮಾಪಕ ಮುನಿರತ್ನ ಮೊದಲಾದವರು ರಾಜಕಾರಣದಲ್ಲಿ ಗಮನ ಸೆಳೆದಿದ್ದಾರೆ.

ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗ್ಡೆ ಒಂದೆರರಡು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅನಂತ್ ನಾಗ್ ಸಚಿವರಾಗಿಯೂ ಕೆಲಸ ಮಾಡಿದ್ದರು. ರಮ್ಯಾ, ರಕ್ಷಿತಾ, ಭಾವನಾ, ಪೂಜಾಗಾಂಧಿ, ತಾರಾ, ಜಯಮಾಲಾ, ಮಾಳವಿಕಾ ಸೇರಿದಂತೆ ಹಲವರು ರಾಜಕಾರಣದಲ್ಲಿ ಗಮನ ಸೆಳೆದವರಾಗಿದ್ದಾರೆ.

ಉಪೇಂದ್ರ ಹೊಸ ಆಶಯದೊಂದಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರಾದರೂ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಉಪೇಂದ್ರ ಮತ್ತೆ ರಾಜಕಾರಣದಲ್ಲಿ ಸಕ್ರಿಯರಾಗುವ ನಿರೀಕ್ಷೆ ಇದೆ.

ಚಿತ್ರರಂಗದಿಂದ ಬಂದ ಕಲಾವಿದರಲ್ಲಿ ಕೆಲವರು ಯಶಸ್ವಿಯಾದರೆ, ಮತ್ತೆ ಕೆಲವರಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಕೆಲವರು ಪಕ್ಷದ ಪರ ಪ್ರಚಾರಕ್ಕೆ ಸೀಮಿತರಾಗಿದ್ದಾರೆ. ಇನ್ನು ಕೆಲವರು ರಾಜಕೀಯದಿಂದ ದೂರ ಉಳಿದರೂ, ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದಾರೆ. ಸುದೀಪ್, ದರ್ಶನ್, ಯಶ್, ಶಿವರಾಜ್ ಕುಮಾರ್ ಅವರು ಯಾವುದೇ ಪಕ್ಷಗಳಲ್ಲಿ ಗುರುತಿಸಿಕೊಳ್ಳದಿದ್ದರೂ, ತಮ್ಮ ಆತ್ಮೀಯರ ಪರವಾಗಿ ಪ್ರಚಾರ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...