alex Certify
ಕನ್ನಡ ದುನಿಯಾ       Mobile App
       

Kannada Duniya

2 ವರ್ಷಗಳ ಬಳಿಕ ಬಯಲಾಯ್ತು ಶಾಕಿಂಗ್ ಸಂಗತಿ: ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಹಾಕಲಾಗಿತ್ತು ಸ್ಕೆಚ್

ಜೂನ್ 27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿರುವ ಕುಖ್ಯಾತ ರೌಡಿ ಸೈಕಲ್ ರವಿ ವಿಚಾರಣೆ ವೇಳೆ, 2 ವರ್ಷಗಳ ಹಿಂದೆ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ.

ಆ ಸಂದರ್ಭದಲ್ಲಿ ಬೆಂಗಳೂರು ನಗರದ ಹೊರ ವಲಯದಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಯಶ್ ಹತ್ಯೆಯ ವಿಚಾರ ಪ್ರಸ್ತಾಪವಾಗಿತ್ತು ಎನ್ನಲಾಗಿದ್ದು, ಪಾರ್ಟಿ ಬಳಿಕ ಈ ಕುರಿತು ಸಂಚು ರೂಪಿಸಲು ಯಾರೂ ಮುಂದಾಗಿರಲಿಲ್ಲವಾದರೂ ಮತ್ತೊಬ್ಬ ರೌಡಿ ಕೋದಂಡ ಎಂಬಾತ ಈ ವಿಚಾರದಲ್ಲಿ ಆಸಕ್ತಿ ವಹಿಸಿದ್ದನೆಂದು ಹೇಳಲಾಗಿದೆ.

ಸೈಕಲ್ ರವಿ ಹಾಗೂ ಕೋದಂಡ ಪರಸ್ಪರ ವಿರೋಧಿಗಳಾಗಿದ್ದವರು ಈಗ ರಾಜಿ ಮಾಡಿಕೊಂಡು ಒಂದಾಗಿದ್ದಾರೆನ್ನಲಾಗಿದೆ. ಕೋದಂಡ ಪೊಲೀಸರ ಕೈಗೆ ಸಿಗದೆ ಇನ್ನೂ ಭೂಗತನಾಗಿದ್ದು, ಆತನ ಬಂಧನದ ಬಳಿಕ ಹತ್ಯೆ ಸಂಚಿನ ಕುರಿತು ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭಿಸುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...