alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗು ಜನಿಸಲಿ ಎಂದು ಅಪೇಕ್ಷಿಸುತ್ತಿದ್ದಾರೆ ಯಶ್

ಹೊಸ ಅತಿಥಿಯ ನಿರೀಕ್ಷೆಯಲ್ಲಿರುವ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ದಂಪತಿಗೆ ಜನಿಸಲಿರುವ ಮಗುವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯೇ ಆಗುತ್ತಿದೆ. ಒಂದಿಷ್ಟು ಅಭಿಮಾನಿಗಳು ಗಂಡು ಮಗು ಜನಿಸುವ ನಿರೀಕ್ಷೆಯಲ್ಲಿದ್ದರೆ ಇನ್ನು ಹಲವರು ಹೆಣ್ಣು ಮಗು ಜನಿಸಬೇಕೆಂದು ಬಯಸಿದ್ದಾರೆ. ಅಭಿಮಾನಿಗಳ ಈ ಚರ್ಚೆ ನಡುವೆ ನಟ ಯಶ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಹೌದು, ನಟ ಯಶ್ ತಮಗೆ ಹೆಣ್ಣು ಮಗು ಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಕಾರಣ ತಮ್ಮ ಮನೆಯಲ್ಲಿ ಹೆಚ್ಚು ಗಂಡು ಮಕ್ಕಳೆ ಇದ್ದಾರೆ. ತಮ್ಮ ತಂಗಿಗೂ ಗಂಡು ಮಗು ಇದೆ. ಆದ್ದರಿಂದ ತಮಗೆ ಹೆಣ್ಣು ಮಗು ಬೇಕು ಎಂಬುದು ಯಶ್ ಅವರ ಮನದಾಸೆ

ಇದೇ ವೇಳೆ ಹೆಣ್ಣು ಗರ್ಭಿಣಿಯಾದಾಗ ನೂರಾರು ಕನಸುಗಳನ್ನು ಕಾಣುತ್ತಾಳೆ. ಆ ಎಲ್ಲ ಬಯಕೆಗಳನ್ನ ಈಡೇರಿಸುವುದು ಗಂಡನ ಕರ್ತವ್ಯ ಎಂದಿರುವ ಯಶ್, ರಾಧಿಕಾ ಬಯಕೆಯಂತೆ ದುಬೈಗೆ ಹೋಗಿ ಅಲ್ಲಿನ ಸುಂದರ ತಾಣಗಳನ್ನು ವೀಕ್ಷಿಸಿ ಬಂದಿರುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...