alex Certify
ಕನ್ನಡ ದುನಿಯಾ       Mobile App
       

Kannada Duniya

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಮಾಹಿತಿ

yash nm 789

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟರಾಗಿದ್ದು, ಯೂತ್ ಐಕಾನ್ ಎನಿಸಿಕೊಂಡಿದ್ದಾರೆ. ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದು ಗಳಿಕೆಯಲ್ಲಿ ದಾಖಲೆಯನ್ನೇ ಬರೆದಿದೆ. ಇದೀಗ ಅವರ ಮತ್ತೊಂದು ಚಿತ್ರ ಆರಂಭವಾಗಿದೆ.

ಯಶ್ ಅವರ ಹೊಸ ಸಿನಿಮಾ ಆರಂಭವಾದ ನಂತರ ಸಣ್ಣಪುಟ್ಟ ಗೊಂದಲ ಮುಂದುವರೆದಿದೆ. ಕೆ. ಮಂಜು ನಿರ್ಮಾಣದ, ಮಹೇಶ್ ರಾವ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ನಾಲ್ಕನೇ ಬಾರಿಗೆ ರಾಧಿಕಾ ಪಂಡಿತ್ ಜೊತೆಯಾಗುತ್ತಿದ್ದಾರೆ. ಯಶ್, ರಾಧಿಕಾ ಪಂಡಿತ್ ಜೊತೆಯಾಗಿ ನಟಿಸಿದ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದರಿಂದ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಹೊಸ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ.

ಮೊದಲಿಗೆ ಚಿತ್ರದ ಮುಹೂರ್ತ ನಡೆದಾಗ ‘ಡೆಡ್ಲಿ’ ಆದಿತ್ಯ ಕೂಡ ಭಾಗವಹಿಸಿದ್ದರು. ಅವರೂ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತಾದರೂ, ಅವರು ಹೊರ ಬಂದಿದ್ದರು. ಚಿತ್ರಕ್ಕೆ ‘ಗಾಂಧಿಕ್ಲಾಸ್’ ಎಂದು ಹೇಳಲಾಗಿತ್ತಾದರೂ, ನಂತರ ‘ಮಾಂಜಾ’ ಟೈಟಲ್ ಫೈನಲ್ ಮಾಡಲಾಗಿತ್ತು. ಆದರೆ ‘ಮಾಂಜಾ’ ಟೈಟಲ್, ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಬಳಿ ಇದೆ. ಅವರು ಈ ಟೈಟಲ್ ಯಾರಿಗೂ ಕೊಡಲ್ಲ ಎಂದು ಹೇಳಿದ್ದಾರೆನ್ನಲಾಗಿದ್ದು, ಯಶ್ ಹಾಗೂ ನಿರ್ದೇಶಕರೊಂದಿಗೆ ಮಾತನಾಡಿ, ಅದೇ ಟೈಟಲ್ ಪಡೆಯುವ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ಕೆ. ಮಂಜು. ಈ ಗೊಂದಲಗಳೆಲ್ಲಾ ಆದಷ್ಟು ಬೇಗ ಬಗೆಹರಿಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...