alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೆಷಲ್ ನಂಬರ್ ಗಾಗಿ ರಾಕಿಂಗ್ ಸ್ಟಾರ್ ಯಶ್ ವೆಚ್ಚ ಮಾಡಿದ್ದೆಷ್ಟು ಗೊತ್ತಾ…?

ಹಲವು ಐಷಾರಾಮಿ ಕಾರುಗಳ ಒಡೆಯರಾಗಿರುವ ರಾಕಿಂಗ್ ಸ್ಟಾರ್ ಯಶ್, ತಾವು ಇತ್ತೀಚೆಗೆ ಖರೀದಿಸಿರುವ ಹೊಸ ಬೆಂಜ್ ಕಾರಿಗೆ ಸ್ಪೆಷಲ್ ನಂಬರ್ ಪಡೆಯಲು ಬರೋಬ್ಬರಿ 72 ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ.

ತಮ್ಮ ಹೊಸ ಕಾರಿಗೆ ಯಶ್, KA 05 MY 8055 ನಂಬರ್ ಪಡೆದುಕೊಂಡಿದ್ದು, ಇಂಟ್ರೆಸ್ಟಿಂಗ್ ಸಂಗತಿ ಎಂದರೆ 8055 ಸಂಖ್ಯೆ BOSS ಎಂಬುದನ್ನೂ ಸೂಚಿಸುತ್ತದೆ.

ರಾಕಿಂಗ್ ಸ್ಟಾರ್ ಯಶ್ ಪರವಾಗಿ ರಾಕೇಶ್ ಎಂಬವರು ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, 8055 ನಂಬರ್ ಗಾಗಿ 72 ಸಾವಿರ ರೂ.ಗಳನ್ನು ಪಾವತಿಸಿದ್ದಾರೆ.

ಯಶ್ ಅವರ ಬಳಿ ಇರುವ ಬಹುತೇಕ ಕಾರುಗಳ ನಂಬರ್ 8055 ಆಗಿದ್ದು, ಈಗ ಅವರ ಹೊಸ ಬೆಂಜ್ ಕಾರಿಗೂ ಇದೇ ನಂಬರ್ ಲಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...