alex Certify
ಕನ್ನಡ ದುನಿಯಾ       Mobile App
       

Kannada Duniya

ಸರಿಗಮಪ ಲಿಟಲ್ ಚಾಂಪ್ಸ್ ಗೆದ್ದಿದ್ದ ಹೇಮಂತ್ ಈಗ ರೈಸಿಂಗ್ ಸ್ಟಾರ್

ರಿಯಾಲಿಟಿ ಸಿಂಗಿಂಗ್ ಕಾರ್ಯಕ್ರಮ ರೈಸಿಂಗ್ ಸ್ಟಾರ್ – 2 ನಲ್ಲಿ ಮಥುರಾದ ಹೇಮಂತ್ ಬ್ರಿಜ್ವಾಸಿ ಗೆಲುವು ಸಾಧಿಸಿದ್ದಾರೆ. ಶೇ.83ರಷ್ಟು ವೋಟ್ ಪಡೆದ ಅವರು, ಪಂಜಾಬ್ ನ ರೋಹನ್ ಪ್ರೀತ್ ಸಿಂಗ್ ಹಾಗೂ ಕೇರಳದ ವಿಷ್ಣುಮಾಯಾ ರಮೇಶ್ ರನ್ನು ಹಿಂದಿಕ್ಕಿದ್ರು.

ರೈಸಿಂಗ್ ಸ್ಟಾರ್ 2 ಟ್ರೋಫಿ ಹಾಗೂ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಹಿಂದೆ ಹೇಮಂತ್, ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋವನ್ನು ಸಹ ಗೆದ್ದಿದ್ದರು.

ರೈಸಿಂಗ್ ಸ್ಟಾರ್ 2 ಕಾರ್ಯಕ್ರಮ ಮೂರು ತಿಂಗಳಿನಿಂದ ಪ್ರಸಾರವಾಗುತ್ತಿತ್ತು. ರೋಹನ್ ಪ್ರೀತ್, ವಿಷ್ಣುಮಾಯಾ ಹಾಗೂ ಝಾಯಿದ್ ಅಲಿಯಿಂದ ಹೇಮಂತ್ ಗೆ ಭಾರೀ ಪೈಪೋಟಿ ಎದುರಾಗಿತ್ತು. ಶಂಕರ್ ಮಹಾದೇವನ್, ಮೊನಾಲಿ ಠಾಕೂರ್ ಹಾಗೂ ದಿಲ್ಜಿತ್ ದೊಸಾಂಜ್ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.

9 ವರ್ಷಗಳ ಹಿಂದೆ ಹೇಮಂತ್, ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಆಗಿದ್ದರು. 2009ರಲ್ಲಿ ಅವರಿಗೆ ಈ ಟ್ರೋಫಿ ಒಲಿದಿತ್ತು. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಹಾಗೂ ಜೋ ಜೀತಾ ವಹಿ ಸಿಕಂದರ್ 2 ಕಾರ್ಯಕ್ರಮಗಳಲ್ಲೂ ಹೇಮಂತ್ ಸ್ಪರ್ಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...