alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಸಲ್ಮಾನ್ ಅತ್ತಿಗೆಯೊಂದಿಗೆ ಬಾಲಿವುಡ್ ನಟನ ದುರ್ವರ್ತನೆ

ಕೆಲ ದಿನಗಳ ಹಿಂದೆ ನಡೆದ ಬಾಲಿವುಡ್ ನಟಿ ಸೋನಂ ಕಪೂರ್ ವಿವಾಹ ಸಮಾರಂಭದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ಹಿರಿಯ ನಟರೊಬ್ಬರು ಖ್ಯಾತ ನಟ ಸಲ್ಮಾನ್ ಖಾನ್ ಅತ್ತಿಗೆಯೊಂದಿಗೆ ದುರ್ವರ್ತನೆ ತೋರಿದ್ದಾರೆಂದು ಹೇಳಲಾಗಿದೆ.

ಹೌದು…ನಟ ರಿಷಿ ಕಪೂರ್ ಈ ರೀತಿಯ ವರ್ತನೆ ತೋರಿದ್ದಾರೆನ್ನಲಾಗಿದ್ದು, ಬಳಿಕ ರಿಷಿಕಪೂರ್ ಪತ್ನಿ ನೀತೂ ಕಪೂರ್ ಕ್ಷಮೆ ಯಾಚಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಂಡಿದ್ದಾರೆ.

ಅಷ್ಟಕ್ಕೂ ರಿಷಿ ಕಪೂರ್ ಈ ರೀತಿ ಮಾಡಿದ್ದಕ್ಕೆ ಕಾರಣವಾಗಿದ್ದು ಸಲ್ಮಾನ್ ಖಾನ್. ಸೋನಂ ಕಪೂರ್ ವಿವಾಹ ಸಮಾರಂಭಕ್ಕೆ ಆಗಮಿಸಿದ ವೇಳೆ ತಮಗೆ ಎದುರಾದ ಸಲ್ಮಾನ್ ಖಾನ್, ಸೂಕ್ತ ರೀತಿಯಲ್ಲಿ ಗೌರವ ನೀಡಲಿಲ್ಲವೆಂಬುದು ರಿಷಿ ಕಪೂರ್ ತಕರಾರು.

ಹೀಗಾಗಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಖಾನ್ ಸಹೋದರ ಸೋಹೆಲ್ ಖಾನ್ ಪತ್ನಿ ಸೀಮಾ ಖಾನ್ ಬಳಿ ತೆರಳಿದ ರಿಷಿ ಕಪೂರ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ರಿಷಿ ಕಪೂರ್ ಪತ್ನಿ ನೀತೂ ಕಪೂರ್ ಪತಿ ಪರವಾಗಿ ಕ್ಷಮೆ ಯಾಚಿಸಿ ಪರಿಸ್ಥಿತಿ ತಿಳಿಗೊಳಿಸಿದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...